ಪೃಥ್ವಿ ಅಂಬಾರ್ ಚೊಚ್ಚಲ ನಿರ್ದೇಶನದ ‘ಬುಲ್ಡಾಗ್’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ತಿಗೊಂಡಿದೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ.

‘ಹಲವು ಸಿನಿಮಾಗಳಲ್ಲಿ ನಟಿಸಿದ ನಂತರ ಇದೇ ಮೊದಲ ಸಲ ನಿರ್ದೇಶನಕ್ಕೆ ಕೈಹಾಕಿದ್ದೇನೆ. ದಕ್ಷಿಣ ಕನ್ನಡದ ನಾಲ್ವರು ಹುಡುಗರ ಕಥೆ. ಈ ನಾಲ್ವರು ಯಾವುದೋ ಕಾರಣಕ್ಕೆ ಬೆಂಗಳೂರಿಗೆ ಬರುತ್ತಾರೆ. ಎರಡು ತಿಂಗಳ ಅಂತರದಲ್ಲಿ ನಡೆಯುವ ಈ ಕಥೆಯಲ್ಲಿ ಬೆಂಗಳೂರಿಗೆ ಬಂದವರು ಮಾಡುವ ಎಡವಟ್ಟುಗಳಿವೆ. ಅವರು ವಾಪಾಸ್ ಊರಿಗೆ ಹೋಗುವವರೆಗೆ ನಡೆಯುವ ಘಟನೆಗಳೇ ಚಿತ್ರಕಥೆ. ಚಿತ್ರದ ಪಾತ್ರಗಳು ಬೆಂಗಳೂರಿನಲ್ಲಿದ್ದಾಗ ಕನ್ನಡದಲ್ಲಿ ಮತ್ತು ಊರಿನಲ್ಲಿದ್ದಾಗ ತುಳುವಿನಲ್ಲಿ ಮಾತನಾಡುತ್ತವೆ. ಹಾಗಾಗಿ ಇದನ್ನು ತುಳು ಅಥವಾ ಕನ್ನಡ ಸಿನಿಮಾ ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ನಿರ್ದೇಶಕ.

‘ಬುಲ್ಡಾಗ್’ ಪಾತ್ರದಲ್ಲಿ ಪೃಥ್ವಿ ಅಂಬಾರ್ ಅವರೇ ನಟಿಸಿದ್ದಾರೆ. ಲಾಂಚು ಲಾಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚೆಂತುಮೆಪ್ಪಯರ್ ಛಾಯಾಚಿತ್ರಗ್ರಹಣ, ನಿಶಾನ್ ರೈ ಸಂಗೀತ ಸಂಯೋಜನೆ, ಗಣೇಶ್ ನೀರ್ಚಲ್ ಸಂಕಲನವಿದೆ. ಸಿಹಿ ಗೌಡ, ಆರಾಧನಾ ಭಟ್, ಪ್ರಜ್ವಲ್ ಪೈ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಕಾಶ್ ತೂಮಿನಾಡು ಮೊದಲಾದವರು ಚಿತ್ರದಲ್ಲಿದ್ದಾರೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-1907973685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.