ಶುಕ್ರವಾರ, ಮೇ 29, 2020
27 °C

ಅವಳಿ–ಜವಳಿಯ ಥ್ರಿಲ್ಲರ್ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅವಳಿ–ಜವಳಿ ಮಕ್ಕಳು ಬದುಕಿನಲ್ಲಿ ಎದುರಿಸುವ ಬವಣೆಯ ನೈಜ ಕಥೆ ಹೇಳಲಿದೆಯಂತೆ ‘ಬೈ 1 ಗೆಟ್‌ 1 ಫ್ರೀ’ ಚಿತ್ರ. ಇದರ ಮೋಷನ್ ಪೋಸ್ಟರ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಸಸ್ಪೆನ್ಸ್‌ ಮತ್ತು ಥ್ರಿಲ್ಲರ್ ಚಿತ್ರ ಇದು.

ಮೈಸೂರಿನ ಅವಳಿ–ಜವಳಿಗಳಾದ ಮಧು ಮಿಥುನ್ ಮತ್ತು‌ ಮನು ಮಿಲನ್ ಈ ಚಿತ್ರದ ನಾಯಕರು. ನಟ ಕಿಶೋರ್‌ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರದ್ದು ಇದರಲ್ಲಿ ಅಂಚೆಯಣ್ಣ ಮನ್ಮಥನ ಪಾತ್ರವಂತೆ. ಅವರ ಪಾತ್ರವೇ ಚಿತ್ರದ ಕೇಂದ್ರಬಿಂದು. ನಾಯಕಿಯಾಗಿ ರಿಷಿತಾ ಮಲ್ನಾಡ್‌ ಮತ್ತು ಕಿಶೋರ್‌ಗೆ ಜೋಡಿಯಾಗಿ ರೋಹಿಣಿ ತೆಲ್ಕರ್ ನಟಿಸಿದ್ದಾರೆ.

ಹರೀಶ್ ಅನಿಲ್ಗೋಡ್ ಇದಕ್ಕೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ‘ನೋಎಂಟ್ರಿ’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರ ಬೆನ್ನಿಗಿದೆ. ಹರೀಶ್‌ ಚಿತ್ರಕಥೆಯ ಹೊಣೆಯನ್ನು ನಿಭಾಯಿಸಿದ್ದಾರೆ. ಎಸ್‌ಬಿಎಸ್‌ಸಿ ಕ್ರಿಯೇಷಯ್ಸ್‌ನಡಿ ಮಧುರಾಜ್‌ ಸಿ. ಬಂಡವಾಳ ಹೂಡಿದ್ದಾರೆ.

‘ಸಿನಿಮಾ ಬಹುತೇಕ ಶೂಟಿಂಗ್‌ ಮುಗಿದಿದೆ. ಮೈಸೂರು, ಬೆಂಗಳೂರು, ಮುರುಡೇಶ್ವರದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನೆಗೆಟಿವ್‌ ಮತ್ತು ಪಾಸಿಟಿವ್‌ ಶೇಡ್‌ಗಳಲ್ಲಿ ನಾವಿಬ್ಬರು ಕಾಣಿಸಿಕೊಂಡಿದ್ದೇವೆ. ಕೊರೊನಾ ಭೀತಿ ಕಡಿಮೆಯಾದರೆ ಮೇ ತಿಂಗಳಲ್ಲಿ ಚಿತ್ರದ ಟೀಸರ್ ಮತ್ತು ಹಾಡುಗಳು ಬಿಡುಗಡೆಗೆ ತೀರ್ಮಾನಿಸಿದ್ದೇವೆ. ಚಿತ್ರೋದ್ಯಮದ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದರೆ ಜುಲೈನಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಿದೆ’ ಎನ್ನುತ್ತಾರೆ ನಟ ಮನು ಮಿಲನ್.

ಪರದೆ ಮೇಲೆ ಈ ಕಥೆಯನ್ನು ನಿರೂಪಿಸಿರುವುದು ಧ್ರುವ ಸರ್ಜಾ ಮತ್ತು ವಿಜಯ ರಾಘವೇಂದ್ರ. ಸಂಗೀತ ನಿರ್ದೇಶನ ದಿನೇಶ್‌ ಕುಮಾರ್‌ ಅವರದ್ದು. ಅಭಿಷೇಕ್‌ ಪಾಂಡೆ ಮತ್ತು ವಿಶ್ವಜಿತ್‌ ರಾವ್‌ ಅವರ ಛಾಯಾಗ್ರಹಣವಿದೆ. ತ್ರಿಭುವನ್‌ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ಸಾಹಸ ಥ್ರಿಲ್ಲರ್‌ ಮಂಜು, ವೈಲೆಂಟ್‌ ವೇಲು ರಮೇಶ್ ಅವರದ್ದು. ಸುರೇಶ್ ಅರ್ಮುಗಂ ಸಂಕಲನ ನಿರ್ವಹಿಸಿದ್ದಾರೆ. ವಿಜಯ್‌ ಪ್ರಕಾಶ್‌, ಅನನ್ಯ ಭಟ್, ಸ್ನೇಹಾ, ಸಂಜು ಬಸ್ರೂರ್, ಶರತ್‌‌‌ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಉಷಾ ಭಂಡಾರಿ, ವಿಶಾಲ್‌ ಹೆಗ್ಡೆ, ಮಂಜುನಾಥ್‌, ಗೌರೀಶ್‌ ಅಕ್ಕಿ, ಬಾಲರಜವಾಡಿ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.