ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೈರಾಗಿ’ಯ ಲಿರಿಕಲ್‌ ಹಾಡು ನಾಳೆ ಬಿಡುಗಡೆ

Last Updated 2 ಮೇ 2022, 10:38 IST
ಅಕ್ಷರ ಗಾತ್ರ

ನಟ ಶಿವರಾಜ್‌ಕುಮಾರ್ ನಟನೆಯ, ಎಸ್‌.ಡಿ. ವಿಜಯ್ ಮಿಲ್ಟನ್ ನಿರ್ದೇಶನದ 123ನೇ ಸಿನಿಮಾ ‘ಬೈರಾಗಿ’ಯ ಮೊದಲ ಲಿರಿಕಲ್‌ ವಿಡಿಯೊ ಹಾಡನ್ನು ನಟ ‘ದುನಿಯಾ’ ವಿಜಯ್‌ ಮೇ 3ರಂದು ಬೆಳಗ್ಗೆ 10.50ಕ್ಕೆ ಬಿಡುಗಡೆ ಮಾಡಲಿದ್ದಾರೆ.

ತಮ್ಮ 125ನೇ ಚಿತ್ರ ‘ವೇದ’ದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಶಿವರಾಜ್‌ಕುಮಾರ್‌, ಇತ್ತೀಚೆಗಷ್ಟೇ ‘ಬೈರಾಗಿ’ಯ ಡಬ್ಬಿಂಗ್‌ ಪೂರ್ಣಗೊಳಿಸಿದ್ದರು. ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನದಂದು ಬಿಡುಗಡೆಯಾಗಿದ್ದ ‘ಬೈರಾಗಿ’ ಟೀಸರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದು, ಅದರಲ್ಲಿನ ಶಿವರಾಜ್‌ಕುಮಾರ್‌ ಅವರ ಭರ್ಜರಿ ಆ್ಯಕ್ಷನ್‌ ದೃಶ್ಯಗಳಿಗೆ, ಖಡಕ್‌ ಡೈಲಾಗ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಟಗರು’ ಸಿನಿಮಾ ಯಶಸ್ಸಿನ ಬಳಿಕ ಶಿವರಾಜ್‌ಕುಮಾರ್‌ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಶಿವರಾಜ್‌ಕುಮಾರ್‌ ಅವರ ಹುಲಿವೇಷದ ಗೆಟಪ್, ‘ವೇಷ ಹಾಕಿದಾಗ ಮಾತ್ರವಲ್ಲ. ನಾವು ಯಾವಾಗಲೂ ಹುಲಿಯೇ ಎಂದು ದೊಡ್ಡವರು ಹೇಳಿ ಬೆಳೆಸಿದರು. ನಾನು ಬೆಳೆಯುತ್ತಾ ಬೆಳೆಯುತ್ತಾ ಆ ಹುಲೀನೂ ನನ್ನ ಜೊತೆ ಬೆಳೆಯಿತು’ ಎನ್ನುವ ಶಿವರಾಜ್‌ಕುಮಾರ್‌ ಅವರ ಡೈಲಾಗ್‌ ಕೂಡಾ ಎಲ್ಲೆಡೆ ವೈರಲ್ ಆಗಿದೆ. ಅಂಜಲಿ ಈ ಚಿತ್ರದ ನಾಯಕಿ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT