‘ಮತ್ತೊಮ್ಮೆ ನನ್ನದೇ ಕ್ಷಣ, 80 ವರ್ಷ ಹಳೆಯದಾದ, ಬಹು ಸಾಂಪ್ರದಾಯಿಕ ಎನಿಸುವ ಎರಡು ‘ವಿಂಟೇಜ್’ ಸೀರೆಗಳನ್ನು ಹೊಸ ವಿನ್ಯಾಸಕ್ಕೆ ಒಗ್ಗಿಸಿ ಧರಿಸಿದ್ದೇನೆ. ಅಪೂರ್ವ ಎನಿಸುವ ಇಂಥ ಸೀರೆಗಳನ್ನು ಜರಿ ಪಡೆಯುವ ಸಲುವಾಗಿ ಹಾಳುಗೆಡಹುವ ಬದಲು, ದೊಡ್ಡ ಪರಂಪರೆಯನ್ನು ಹೊಂದಿರುವ ಈ ವಸ್ತ್ರಗಳನ್ನು ಹೊಸ ರೂಪದಲ್ಲಿ ಉಳಿಸಿ ಗೌರವಿಸುವ ಕೆಲಸವಿದು. ಪ್ರತಿ ನೂಲಿನ ಹಿಂದೆ ನೆನಪಿದೆ, ಕುಸುರಿ ಕಲೆಯ ಇತಿಹಾಸವಿದೆ. ಅವುಗಳನ್ನು ಮತ್ತೊಮ್ಮೆ ಸೌಂದರ್ಯದ ನವಿರೆಳೆಯಲ್ಲಿ ನೇಯಲಾಗಿದೆ’–

ಹೀಗೊಂದು ಒಕ್ಕಣೆಯನ್ನು ಬರೆದುಕೊಂಡು, ಕನ್ನಡದ ಕಿರುತೆರೆ ನಟಿ ದಿಶಾ ಮದನ್ ತಮ್ಮ ಚಂದದ ಫೋಟೊವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದರು. ಬಹುವರ್ಣದ ಗೌನ್ ತೊಟ್ಟು, ಪ್ಯಾರಿಸ್ನಲ್ಲಿ ನಡೆದ ಪ್ರತಿಷ್ಠಿತ ‘ಕಾನ್ ಚಿತ್ರೋತ್ಸವ’ದ ಕೆಂಪುಹಾಸಿನ ಮೇಲೆ ಮಿಂಚಿದ ಚಿತ್ರವಾಗಿತ್ತು ಅದು.

ಫ್ಯಾಷನ್ ಎಂಬುದಕ್ಕೆ ನಿರ್ದಿಷ್ಟ ಚೌಕಟ್ಟುಗಳಿಲ್ಲ. ಉಡುಗೆ–ವಿನ್ಯಾಸದಲ್ಲಿನ ಅತೀವ ಪ್ರೀತಿಗೆ ಆತ್ಮವಿಶ್ವಾಸದ ನಿಲುವನ್ನು ಬೆರೆಸಿ ನಿಂತರೆ ಅದುವೇ ಫ್ಯಾಷನ್ನಿನ ಹೊಸ ಸ್ಟೇಟ್ಮೆಂಟ್ ಎಂಬುದನ್ನು ದಿಶಾ ತಮ್ಮ ವಿಶಿಷ್ಟ ವಿನ್ಯಾಸದ ಉಡುಗೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಕಾನ್ನಂಥ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ನಟಿಯರ ಫ್ಯಾಷನ್ ಸ್ಟೇಟ್ಮೆಂಟ್ ಏನಿರಬಹುದು ಎಂಬ ಕುತೂಹಲಕ್ಕೆ ಅವರು ತೋರಿಸಿದ್ದು, ಅಪ್ಪಟ ದೇಸಿತನದ, ‘ಕನ್ನಡ ನೆಲ’ದ ಸಾಂಪ್ರದಾಯಿಕ ದಿರಿಸನ್ನು. ಇದನ್ನೇ ಹೊಸಕಾಲಕ್ಕೆ ಒಗ್ಗಿಸಿ ತೊಟ್ಟು, ಕನ್ನಡತಿಯೊಬ್ಬಳು ಸಂಭ್ರಮಪಟ್ಟಿದ್ದನ್ನು ಕ್ಯಾಮೆರಾ ಕಣ್ಣುಗಳು ಚಕಚಕನೆ ಸೆರೆಹಿಡಿದವು.ಹಣೆಯಲ್ಲಿ ಕೆಂಪು ಬೊಟ್ಟು, ಹೊಳೆಯುವ ಮೂಗುತಿ, ನಾಲ್ಕು ಹೆಣೆಯ ಜಡೆ, ಅದರ ತುಂಬಾ ಹೊಳೆಯುವ ಹರಳಿನ ಬಿಲ್ಲೆಗಳು, ಗೌನ್ಗೆ ಒಪ್ಪುವ ಕಿವಿಯೋಲೆ, ಉಗುರುಗಳ ಅಂದ ಹೆಚ್ಚಿಸುವ ಆಭರಣ... ಹೀಗೆ ಎಲ್ಲವನ್ನೂ ತೊಟ್ಟು ಲಕಲಕ ಮಿಂಚಿದರು ದಿಶಾ.

ಕರ್ನಾಟಕದ ದೇಸಿ ಪರಂಪರೆಯನ್ನು ಜಾಗತಿಕವಾಗಿ ಪರಿಚಯಿಸಲು ಇದೊಂದೇ ಅಲ್ಲ, ಬಂಜಾರ ಸಮುದಾಯದ ವಿಶಿಷ್ಟ ಕುಸುರಿ ಕಲೆ ಇರುವ ಕಪ್ಪು ಬಣ್ಣದ ಟಾಪ್ ಮತ್ತು ಸ್ಕರ್ಟ್ ಅನ್ನೂ ತೊಟ್ಟು ಸಂಭ್ರಮಿಸಿದರು.

‘ಬಂಜಾರ ಕಸೂತಿಯ ಈ ವಿನ್ಯಾಸ ರೂಪಿಸಲು ಆರು ತಿಂಗಳು ಸಂಶೋಧನೆ ಮಾಡಲಾಯಿತು. ಬಂಜಾರ ಸಮುದಾಯದ ಐವರು ಮಹಿಳೆಯರನ್ನು ಒಳಗೊಂಡ ತಂಡವು ಸುಮಾರು 2,500 ಗಂಟೆ ಕಸೂತಿಯನ್ನು ಮಾಡಿ ಮುಗಿಸಿದೆ. 80 ಗಂಟೆಗಳ ಅವಧಿಯಲ್ಲಿ ಈ ವಸ್ತ್ರದ ಕಟಿಂಗ್ ಮತ್ತು ಹೊಲಿಯುವ ಪ್ರಕ್ರಿಯೆ ನಡೆದಿದೆ’ ಎಂದು ಅವರು ಹೇಳಿದ್ದಾರೆ.ಶ್ಯಾಮಲ ವರ್ಣದ ಶುದ್ಧ ರೇಷ್ಮೆಯ 15 ಮೀಟರ್ ಬಟ್ಟೆಯ ಮೇಲೆ ಬಂಜಾರ ಸಮುದಾಯದ ಉಡುಗೆಯಲ್ಲಿ ಸಾಮಾನ್ಯವಾಗಿ ಇರುವ ಕನ್ನಡಿ ಹಾಗೂ ಕಸೂತಿಯನ್ನು ಸೇರಿಸಿ ನೇಯಲಾಗಿದೆ. ಹೈ ನೆಕ್ ಟಾಪ್ಗೆ ಸೇರಿಸಿ ಹೊಲಿದಿರುವ ಸ್ಕರ್ಟ್ಗೆ ಗೆಜ್ಜೆಗಳಿರುವ ಸೊಂಟದಪಟ್ಟಿಯೂ ಇದೆ. ಇದಕ್ಕೆ ಒಪ್ಪುವಂಥ ಉತ್ತರ ಕರ್ನಾಟಕ ಶೈಲಿಯ ಆಭರಣ ತೊಟ್ಟು ದಿಶಾ ಕ್ಯಾಮೆರಾಗೆ ಪೋಸ್ ನೀಡಿದ್ದರು. ಈ ಎರಡೂ ಉಡುಪುಗಳನ್ನು ವಸ್ತ್ರವಿನ್ಯಾಸಗಾರ್ತಿ ನಿಹಾರಿಕಾ ವಿವೇಕ್ ವಿನ್ಯಾಸಗೊಳಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಕಳೆದ ಬಾರಿಯ ಕಾನ್ನಲ್ಲಿಯೂ ದಿಶಾ ಚೆಟ್ಟಿನಾಡಿನ ಕುಶಲಕರ್ಮಿಗಳು ನೇಯ್ದ ಹವಳದ ಬಣ್ಣದ ಶುದ್ಧ ಕಾಂಜೀವರಂ ಸೀರೆಯನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಬಾರಿ ಅವರು ತೊಟ್ಟ ವಸ್ತ್ರಗಳಂತೂ ಎಷ್ಟು ಸೊಗಸಾಗಿ ಇದ್ದವೆಂದರೆ, ‘ಹಳೆಯ ಬಟ್ಟೆಗಳನ್ನು ಹೀಗೂ ಮರುವಿನ್ಯಾಸಗೊಳಿಸಬಹುದೇ’ ಎಂಬ ಪ್ರಶ್ನೆಯನ್ನು ಮೂಡಿಸಿದವು. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1920135350

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.