ಮಾರ್ಚ್‌ನಲ್ಲಿ ಬರಲಿದ್ದಾಳೆ ಕ್ಯಾಪ್ಟನ್‌ ಮಾರ್ವೆಲ್‌

7

ಮಾರ್ಚ್‌ನಲ್ಲಿ ಬರಲಿದ್ದಾಳೆ ಕ್ಯಾಪ್ಟನ್‌ ಮಾರ್ವೆಲ್‌

Published:
Updated:
Prajavani

ಸೂಪರ್‌ ಹೀರೊ ಸಿನಿಮಾ ಮತ್ತು ಟಿ.ವಿ. ಸರಣಿಗಳ ನಿರ್ಮಾಪಕ ಸಂಸ್ಥೆ ಮಾರ್ವೆಲ್ ಸ್ಟುಡಿಯೊಸ್‌ ‘ಕ್ಯಾಪ್ಟನ್‌ ಮಾರ್ವೆಲ್‌’ನ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದೆ.

ಸೂಪರ್‌ ಹೀರೊಗಳಾಗಿ ಪುರುಷ ಪಾತ್ರಗಳನ್ನೂ, ಪಾತ್ರಧಾರಿಗಳನ್ನೂ ನೋಡಿ ಏಕತಾನ ಅನಿಸಿದವರಿಗೆ ‘ಕ್ಯಾಪ್ಟನ್‌ ಮಾರ್ವೆಲ್‌’ ಸೂಪರ್‌ ಹೀರೊಯಿನ್‌ನ ಸಾಹಸಗಳು ಮುದ ನೀಡಬಹುದು. ಕಾಮಿಕ್‌ ಕತೆಗಳನ್ನು ಅತ್ಯಾಧುನಿಕ ಅನಿಮೇಷನ್‌ ತಂತ್ರಜ್ಞಾನಗಳ ನೆರವಿನಿಂದ ತೆರೆಯ ಮೇಲೆ ತರುವ ಮೂಲಕ ಮಾರ್ವೆಲ್‌ ಸ್ಟುಡಿಯೊಸ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದೆ. ಕ್ಯಾಪ್ಟನ್‌ ಮಾರ್ವೆಲ್‌ ಮುಂದಿನ ಮಾರ್ಚ್‌ 8ರಂದು ಕ್ಯಾಪ್ಟನ್‌ ತೆರೆಯ ಮೇಲೆ ಬರಲಿದ್ದಾಳೆ. 

ಕಾಮಿಕ್‌ ಕತೆ ಆಧರಿತ ಸೂಪರ್‌ ಹೀರೊ ಸಿನಿಮಾ ಸರಣಿಗಳು ಒಂದಕ್ಕೊಂದು ತಳಕು ಹಾಕಿಕೊಂಡಿರುವುದು ವಿಶೇಷ. ಕ್ಯಾಪ್ಟನ್‌ ಮಾರ್ವೆಲ್ ಕತೆ ಮತ್ತು ಪಾತ್ರವೂ ಇದಕ್ಕೆ ಹೊರತಾಗಿಲ್ಲ. ಸಾಮ್ಯುಯೆಲ್‌ ಎಲ್. ಜ್ಯಾಕ್ಸನ್‌ ಅವರ ಯುವ ನಿಕ್‌ ಫರಿ ಮತ್ತು ಜೂಡ್‌ ಲಾ ಅವರು ಮಾರ್ವೆಲ್‌ ಜೊತೆ ಪೋಸ್ಟರ್‌ನಲ್ಲಿ ಪೋಸ್‌ ಕೊಟ್ಟಿದ್ದಾರೆ. ಸ್ಟಾರ್‌ಫೋರ್ಸ್‌ನ ಪಾತ್ರಗಳಾದ ಏಲಿಯನ್‌ ಯೋಧರ ತಂಡವೂ ಮಾರ್ವೆಲ್‌ಗೆ ಮುಖಾಮುಖಿಯಾಗುತ್ತದೆ.

ಕ್ಯಾಪ್ಟನ್‌ ಮಾರ್ವೆಲ್‌ ಈ ಬಾರಿ ಕಡು ಕೆಂಪು ಮತ್ತು ನೀಲಿ ಬಣ್ಣದ ಸಂಯೋಜನೆಯಿಡುವ ಉಡುಗೆಯಲ್ಲಿ ಮಿಂಚಿದ್ದಾಳೆ. ಈ ಸರಣಿಯ ಪ್ರಚಾರಕ್ಕಾಗಿ ಮಾರ್ವೆಲ್‌ ಸ್ಟುಡಿಯೊಸ್‌ ಪ್ರಕಟಿಸಿರುವ ಮೂರನೇ ಪೋಸ್ಟರ್‌ ಇದಾಗಿದೆ. ಮಹಿಳಾ ಸೂಪರ್‌ ಹೀರೊ ಕುರಿತು ಅದು ನಿರ್ಮಿಸಿರುವ ಮೊದಲ ಸರಣಿಯೂ ಹೌದು. ಅಲ್ಲದೆ, ಈ ಸರಣಿಯನ್ನು ಅಮೆರಿಕದ ಅನ್ನಾ ಬಾಡೆನ್‌ ಎಂಬ ನಿರ್ದೇಶಕಿ, ತಮ್ಮದೇ ದೇಶದ ಸಿನೆಮಾಟೊಗ್ರಾಫರ್‌ ರಯಾನ್‌ ಕೆ. ಫ್ಲೆಕ್‌ ಜೊತೆಗೂಡಿ ನಿರ್ದೇಶಿಸಿದ್ದಾರೆ.

ಮಾರ್ವೆಲ್‌ ಪಾತ್ರ ಮಾಡಿರುವುದು ಬ್ರೀ ಲಾರ್ಸನ್‌ ಎಂಬ ಅಮೆರಿಕ ಮೂಲದ ಪ್ರತಿಭಾವಂತ ನಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !