ಡಿಸೆಂಬರ್‌ನಲ್ಲಿ ವರುಣ್‌ ನತಾಶ ಮದುವೆ?

ಮಂಗಳವಾರ, ಮಾರ್ಚ್ 26, 2019
26 °C
varun marriage

ಡಿಸೆಂಬರ್‌ನಲ್ಲಿ ವರುಣ್‌ ನತಾಶ ಮದುವೆ?

Published:
Updated:
Prajavani

ನಟ ವರುಣ್ ಧವನ್ ಹಾಗೂ ನತಾಶ ದಲಾಲ್ ಅವರ ಪ್ರೀತಿಯ ವಿಷಯ ಈಗ ಬಾಲಿವುಡ್‌ನಲ್ಲಿ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಕೈಕೈ ಹಿಡಿದು ಸೋನಂ ಕಪೂರ್ ಮದುವೆ ಸೇರಿದಂತೆ ಪಾರ್ಟಿ, ಡಿನ್ನರ್, ಡೇಟಿಂಗ್‌ಗಳಿಗೆ ಅಡ್ಡಾಡಿರುವ ಸಂಗತಿಗಳು ಗೊತ್ತಿರುವಂಥದ್ದೆ.

ವರುಣ್‌ ಮತ್ತು ನತಾಶ ತಮ್ಮ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಸಲುವಾಗಿ ಈ ವರ್ಷ ಹಸೆಮಣೆ ಏರಲಿದ್ದಾರಂತೆ. ಇದೇ ವರ್ಷಾಂತ್ಯದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಕರಣ್‌ ಜೋಹರ್ ಅವರ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ನತಾಶಳನ್ನು ಪ್ರೀತಿಸುತ್ತಿರುವ ವಿಷಯದ ಕುರಿತು ಮಾತನಾಡಿರುವ ವರುಣ್, ತಾವಿಬ್ಬರೂ ಮದುವೆಯಾಗುತ್ತಿರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ನತಾಶ, ವರುಣ್ ಇಬ್ಬರೂ ಬಾಲ್ಯಸ್ನೇಹಿತರಾಗಿದ್ದು, ಈಚೆಗೆ ಇಬ್ಬರೂ ಬಹಿರಂಗವಾಗಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !