ಭಾನುವಾರ, ಸೆಪ್ಟೆಂಬರ್ 22, 2019
27 °C

‘ಚಡ್ಡಿ ದೋಸ್ತ್’ಗೆ ಸುದೀಪ್‌ ಸಾಥ್‌

Published:
Updated:
Prajavani

‘ಆಸ್ಕರ್’ ಕೃಷ್ಣ ನಿರ್ದೇಶನದ ಶಬೀನ ಅರ ಬಂಡವಾಳ ಹೂಡಿರುವ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರದ ಫಸ್ಟ್‌ ಲುಕ್ ಅನ್ನು ನಟ ಸುದೀಪ್‌ ಅನಾವರಣಗೊಳಿಸಿದರು.

ಈ ಸಿನಿಮಾಕ್ಕೆ ಲೋಕೇಂದ್ರ ಸೂರ್ಯ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅವರು ಕೂಡ ನಿರ್ದೇಶಕರಾಗಿದ್ದು, ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಎಂಬ ಸಿನಿಮಾ ನಿರ್ದೇಶಿಸಿದ್ದರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. 

‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಸಿನಿಮಾದಲ್ಲಿ ಎರಡು ಪ್ರಮುಖ ಪಾತ್ರಗಳಿದ್ದು, ಆಸ್ಕರ್ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ಅವರೇ ನಿರ್ವಹಿಸಲಿದ್ದಾರೆ. ನಾಯಕಿಯ ಹುಡುಕಾಟ ನಡೆದಿದೆ. ಸ್ನೇಹ, ಪ್ರೀತಿ, ರಾಜಕೀಯ, ಅಪರಾಧ ಮತ್ತು ಪೊಲೀಸ್ ವ್ಯವಸ್ಥೆಯ ಸುತ್ತ ಚಿತ್ರದ ಕಥೆ ಹೊಸೆಯಲಾಗಿದೆಯಂತೆ. ಕಾಮಿಡಿ ಕ್ರೈಂ ಥ್ರಿಲ್ಲರ್ ಕಥನ ಇದು. ಇದೇ ತಿಂಗಳಿನಿಂದ ಶೂಟಿಂಗ್‌ ಆರಂಭವಾಗಲಿದೆ. ಅನಂತು ಸಂಗೀತ ಸಂಯೋಜಿಸಿದ್ದು. ವಿನಯ್ ಗೌಡ ಅವರ ಛಾಯಾಗ್ರಹಣವಿದೆ. 

Post Comments (+)