ಮುಂಬೈ: ಹಿಂದಿ ಚಲನಚಿತ್ರ ಹಾಗೂ ಕಿರುತೆರೆ ನಟ ರಮಾಕಾಂತ್ ದಯಾಮಾ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಮಾಕಾಂತ್ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಚಿಕಿತ್ಸೆ ಫಲಿಸದೇ ಮುಂಬೈನಲ್ಲಿ ಮೃತರಾಗಿದ್ದಾರೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ರಮಾಕಾಂತ್ ದಯಾಮಾ ಅವರು ಶಾರುಕ್ ಖಾನ್ ಅವರ ಚಕ್ ದೇ ಇಂಡಿಯಾ ಸೇರಿದಂತೆ ಹಲವು ಹಿಂದಿ ಸಿನಿಮಾ ಮತ್ತು ವೆಬ್ ಸಿರೀಸ್ಗಳಲ್ಲಿ ನಟಿಸಿದ್ದರು.

‘ಸ್ಕ್ಯಾಮ್ 1992: ದಿ ಹರ್ಷದ್ ಮೆಹ್ತಾ ಸ್ಟೋರಿ,‘ ರಾಮ್ ಸೇತು’, ‘ಧನಕ್’, ‘ಬ್ರದರ್ಸ್’, ‘ದಿ ಟ್ರಯಲ್’, ‘ಕ್ರ್ಯೂ’, ‘ಫರ್ಜಿ’, ‘ಮುಂಬೈ ಸಾಗಾ’, ‘ದಿ ಚಾರ್ಜ್ಶೀಟ್’ ಸಿನಿಮಾಗಳಲ್ಲಿ ನಟಿಸಿದ್ದರು. ಈ ಕುರಿತು ಎನ್ಡಿಟಿವಿ ವೆಬ್ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.