ಚಾಮರಾಜನಗರ: ‘ಕನ್ನಡ ಚಿತ್ರರಂಗದ ಸಾಹಿತಿ ಚಿ.ಉದಯ ಶಂಕರ್ ದೇಶದ ಸಿನಿಮಾ ಇತಿಹಾಸದಲ್ಲೇ ವಿಶಿಷ್ಟ ಸಾಹಿತಿಯಾಗಿದ್ದು 3000ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ದಾಖಲೆ ನಿರ್ಮಿಸಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಚಿ.ಉದಯ ಶಂಕರ್ ನೆನಪು ಹಾಗೂ ಕೊಡುಗೆ ಕುರಿತ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಗೀತ ರಚನೆಕಾರರಾಗಿ, ಸಂಭಾಷಣಾಕಾರರಾಗಿ ಮೂರು ದಶಕಗಳ ಕಾಲ ಚಲನಚಿತ್ರಗಳಿಗೆ ಗೀತೆ ಹಾಗೂ ಭಕ್ತಿ ಗೀತೆಗಳನ್ನು ರಚಿಸುವ ಮೂಲಕ ಕನ್ನಡಿಗರ ಜನ ಮಾನಸದಲ್ಲಿ ಉಳಿದಿದ್ದಾರೆ’ ಎಂದರು.

‘ಚಿ.ಉದಯಶಂಕರ್ ಸಾಹಿತ್ಯದಲ್ಲಿ ಸರಳ, ಮಧುರ, ಕಾವ್ಯಾತ್ಮಕವಾದ ಸೊಗಸು ಕಾಣಬಹುದು. ಅವರ ಗೀತೆಗಳಲ್ಲಿ ಭಾವನಾತ್ಮಕವಾದ ವಿಚಾರಗಳು, ಆಳವಾದ ಚಿಂತನೆ, ಗಹನವಾದ ಅರ್ಥ ನಿರೂಪಣೆ ಒಳಗೊಂಡಿದೆ. ಉದಯ ಶಂಕರ್ ಅವರಿಗೆ ಜನಪ್ರಿಯತೆ ಹಾಗೂ ಯಶಸ್ಸು ತಂದಕೊಟ್ಟದ್ದು ಗೀತೆಗಳು ಹಾಗೂ ಸಂಭಾಷಣೆ’ ಎಂದರು.

‘ಬಂಗಾರದ ಮನುಷ್ಯ, ಶಂಕರ್ ಗುರು, ಗಂಧದಗುಡಿ, ಕಸ್ತೂರಿ ನಿವಾಸ ಚಿತ್ರಗಳು ದಶಕಗಳ ನಂತರವೂ ಜನರ ಮನಸ್ಸಿನಲ್ಲಿ ಉಳಿದಿದೆ. ಅವರ ಸಾಧನೆಗೆ ರಾಜ್ಯ ಪ್ರಶಸ್ತಿ ಸಹಿತ ಹಲವು ಗೌರವಗಳು ಸಂದಿವೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ರವಿಚಂದ್ರ ಪ್ರಸಾದ್ ಕಹಳೆ ಮಾತನಾಡಿ, ‘ಚಿ.ಉದಯ ಶಂಕರ್ ಇಂದಿನ ಯುವ ಗೀತ ರಚನಕಾರರಿಗೆ ಹಾಗೂ ಸಂಭಾಷಣಕಾರರಿಗೆ ಮಾದರಿ. ಅವರ ಪ್ರತಿ ಚಿತ್ರದಲ್ಲೂ ಸಂಭಾಷಣೆ ಹಾಗೂ ಗೀತೆಗಲು ಗಮನ ಸೆಳೆಯುತ್ತಾ ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯುವ ಶಕ್ತಿ ಹೊಂದಿವೆ’ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಕೆ.ಆರಾಧ್ಯ, ಶಿವಲಿಂಗ ಮೂರ್ತಿ, ಮಂಜುನಾಥ್, ಮಹೇಶ್, ಶಿವಲಿಂಗ ಶೆಟ್ಟಿ, ರಾಚಯ್ಯ, ಬಿಳಿಗಿರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-37-854971007

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.