ಚಾಮರಾಜನಗರ: ಕನ್ನಡ ಭಾಷೆ, ಕಲೆ, ಸಂಸ್ಕೃತಿಗೆ ವರನಟ ಡಾ.ರಾಜಕುಮಾರ್ ನೀಡಿರುವ ಕೊಡುಗೆ ಅಪಾರ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಮೇರುನಟ ಡಾ.ರಾಜಕುಮಾರ್ 97ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ನಟ ರಾಜಕುಮಾರ್ ಚಾಮ ರಾಜನಗರ ಜಿಲ್ಲೆಯವರು ಎಂಬುದೇ ನಮಗೆಲ್ಲರಿಗೂ ಹೆಮ್ಮೆ. ಬಾಲ್ಯದಲ್ಲಿ ತಂದೆ ಪುಟ್ಟಸ್ವಾಮಯ್ಯ ಅವರು ನಡೆಸುತ್ತಿದ್ದ ಸಂಚಾರಿ ನಾಟಕ ಕಂಪನಿಯಲ್ಲಿ ಸಣ್ಣ ಪಾತ್ರಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದ ರಾಜಕುಮಾರ್ 1956ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಮೊದಲಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾದರು. ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇ್ಲಲ. ಕನ್ನಡ ಭಾಷೆ ಬಿಟ್ಟು ಇತರೆ ಬಾಷೆಗಳಲ್ಲಿ ನಟಿಸಲು ಅವಕಾಶ ಬಂದರೂ ನಯವಾಗಿ ತಿರಸ್ಕರಿಸಿದ ರಾಜಕುಮಾರ್ ಅಪ್ಪಟ ಕನ್ನಡ ಭಾಷಾಪ್ರೇಮಿಯಾಗಿದ್ದರು. ಅವರ ಭಾಷಾ ಪ್ರೇಮ ಪ್ರತಿಯೊಬ್ಬ ಕನ್ನಡಿಗನಿಗೂ ಮಾದರಿ ಎಂದರು.

ರಾಜಕುಮಾರ್ ಅವರು ನಟಿಸಿರುವ ಪೌರಾಣಿಕ, ಸಾಮಾಜಿಕ, ಭಕ್ತಿಪ್ರಧಾನ ಚಿತ್ರಗಳು ಸಮಾಜವನ್ನೇ ಬದಲಿಸುವಂತಹ ಶಕ್ತಿ ಹೊಂದಿದ್ದವು. ಅವರ ಮನೋಜ್ಞ ಅಭಿನಯಕ್ಕೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ನಟನೆಯ ಜೊತೆಗೆ ಗಾಯನದಲ್ಲೂ ಮಿಂಚಿದ್ದ ರಾಜಕುಮಾರ್ ಸರಳ ಹಾಗೂ ಪ್ರತಿಭಾನ್ವಿತ ನಟ. ಅವರ ಹೆಸರಿನಲ್ಲಿ ಜಿಲ್ಲಾಕೇಂದ್ರದಲ್ಲಿ ಡಾ.ರಾಜಕುಮಾರ್ ರಂಗಮಂದಿರ ನಿರ್ಮಾಣ ಮಾಡಿರುವುದು ಜಿಲ್ಲೆಗೆ ಸಂದ ಗೌರವ ಎಂದು ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು ಮಾತನಾಡಿ ರಾಜ್ಕುಮಾರ್ ಅವರ ಸರಳ ಜೀವನ ಸಮಾಜಕ್ಕೆ ಮಾದರಿಯಾಗಿದ್ದು ಸುಂದರ ಬದುಕಿಗೆ ಪ್ರೇರಣೆಯಾಗಿದೆ. ಸಾಮಾಜಿಕ ಸಂದೇಶಗಳನ್ನು ಹೊಂದಿರುತ್ತಿದ್ದ ಅವರ ಚಿತ್ರಗಳು ಸಮಾಜದ ಬಗ್ಗೆ ಕಳಕಳಿ ಹೊಂದಿರುತ್ತಿದ್ದವು. ಬಂಗಾರದ ಮನುಷ್ಯ ಚಿತ್ರ ವೀಕ್ಷಿಸಿದ ಬಹಳಷ್ಟು ಮಂದಿ ಕೃಷಿ ಕ್ಷೇತ್ರದತ್ತ ಒಲವು ತೋರಿದ್ದರು.

ಎಲ್ಲ ಬಗೆಯ ಪಾತ್ರಗಳಗೂ ಜೀವ ತುಂಬುತ್ತಿದ್ದ ರಾಜ್ಕುಮಾರ್ ಅವರ ನಡೆ-ನುಡಿಯೂ ಅನುಕರಣೀಯ. ಇಂದಿನ ವಿದ್ಯಾರ್ಥಿಗಳು, ಯುವಕರು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯಬೇಕಾದರೆ ರಾಜ್ಕುಮಾರ್ ಚಿತ್ರಗಳನ್ನು ವೀಕ್ಷಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಮಾತನಾಡಿ ‘ಚಾಮರಾಜನಗರದ ಜನರನ್ನು ಕಂಡಾಗಲೆಲ್ಲ ‘ನಮ್ಮ ಕಾಡಿನವರು’ ಎಂದೇ ಮನತುಂಬಿ ಮಾತನಾಡಿಸುತ್ತಿದ್ದ ಡಾ.ರಾಜಕುಮಾರ್ ಮಾನವೀಯತೆ, ಸರಳತೆ, ಸಜ್ಜನಿಕೆಗೆ ಮತ್ತೊಂದು ಹೆಸರಾಗಿದ್ದರು. ಕನ್ನಡ ಭಾಷೆ ಬೆಳವಣಿಗೆಗೆ ಹಾಗೂ ಕನ್ನಡ ಸಿನಿಮಾ ಕ್ಷೇತ್ರದ ಅಭಿವೃದ್ಧಿಗೆ ರಾಜಕುಮಾರ್ ನೀಡಿರುವ ಕೊಡುಗೆ ಬಹಳ ದೊಡ್ಡದು ಎಂದರು.

ಡಾ.ರಾಜಕುಮಾರ್ ಅವರ ಕನ್ನಡದ ಅಸ್ಮಿತೆ ಕುರಿತು ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ರಾಜ್ ಮೇಹು ‘ರಾಷ್ಟ್ರಕವಿ ಕುವೆಂಪು ಹಾಗೂ ನಟ ರಾಜಕುಮಾರ್ ಕನ್ನಡನಾಡಿನ ಅಸ್ಮಿತೆಗಳಾಗಿದ್ದು ಕನ್ನಡಭಾಷೆಯ ಬೆಳವಣಿಗೆಗೆ ನೀಡಿರುವ ಕೊಡುಗೆ ಬಹಳ. ಚಾಮರಾಜನಗರದ ಗಡಿಭಾಗದಲ್ಲಿ ಹುಟ್ಟಿದ ರಾಜಕುಮಾರ್ ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬೆಂದು ಕನ್ನಡ ಬೆಳ್ಳಿತೆರೆಯ ಮಹಾರಾಜನಾಗಿ ಬೆಳೆದು ನಿಂತರು. ಜಗತ್ತಿನ ಶ್ರೇಷ್ಠನಟರಲ್ಲಿ ರಾಜಕುಮಾರ್ ಕೂಡ ಒಬ್ಬರಾಗಿದ್ದು ಅವರ ವಿಶಿಷ್ಠ, ವಿಭಿನ್ನ ಅಭಿನಯ, ಗಾಯನಕ್ಕೆ ಮನಸೋಲದವರಿಲ್ಲ. ನಟನೆಗೂ ಮೀರಿದ ಸರಳ ಹಾಗೂ ಆಕರ್ಷಕ ವ್ಯಕ್ತಿತ್ವ ರಾಜ್ ಅವರದ್ದು ಎಂದರು.

ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ರಾಜ್ಕುಮಾರ್ ಅಭಿನಯಿಸದ ಪಾತ್ರಗಳೇ ಇಲ್ಲ. ಅವರ ವ್ಯಕ್ತಿತ್ವವನ್ನು ಇಂದಿನ ಯುವಜನತೆ ಮಾದರಿಯಾಗಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ರಾಜಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟೀ. ಜವರೇಗೌಡ ಅವರು ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಿದರು. ಹನೂರಿನ ಗಾಯಕ ಕೃಷ್ಣಕುಮಾರ್ ಮತ್ತು ಪುಷ್ಪಾ, ಹರನಹಳ್ಳಿ ನಟರಾಜ್ ರಾಜ್ಕುಮಾರ್ ಸಿನಿಮಾಗಳ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನಗರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಾಜ್ಕುಮಾರ್ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಸ್. ಜಯಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ.ರಮೇಶ, ವಾರ್ತಾ ಸಹಾಯಕರಾದ ಸುರೇಶ್ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-37-903990966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.