ಚಾಮರಾಜನಗರ: ನಟ ರಾಜಕುಮಾರ್ ಕರುನಾಡಿನ ಆಸ್ತಿಯಾಗಿದ್ದು ನಟ, ಗಾಯಕ ಹಾಗೂ ಗೋಕಾಕ್ ಚಳವಳಿಯ ಹೋರಾಟಗಾರರಾಗಿಯೂ ಕನ್ನಡಕ್ಕಾಗಿ ದುಡಿದಿದ್ದಾರೆ ಎಂದು ವಾಣಿಜ್ಯ ಇಲಾಖೆ ಉಪ ಆಯುಕ್ತ ಹಸೀಬುಲ್ಲಾ ಬೇಗ್ ತಿಳಿಸಿದರು.

ನಗರದ ಚಾಮರಾಜೇಶ್ವರ ಸ್ವಾಮಿ ದೇವಾಸ್ಥಾನದ ಮುಂಭಾಗ ಈಶ್ವರಿ ಸೋಷಿಯಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಟ ಬೆಂಗಳೂರು ನಾಗೇಶ್ ಅವರಿಗೆ ‘ಮುತ್ತುರಾಜು’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಡಾ.ರಾಜಮಾರ್ ನಟರಾಗಿ ಮಾತ್ರವಲ್ಲ ಹಿನ್ನೆಲೆ ಗಾಯಕರಾಗಿಯೂ 200ಕ್ಕೂ ಹೆಚ್ಚು ಸಿನಿಮಾಗಳಿಗೆ ದನಿ ನೀಡಿದ್ದಾರೆ. ಮಯೂರ, ಶ್ರೀಕೃಷ್ಣದೇವರಾಯ, ಪುರಂದರದಾಸ, ಕನಕದಾಸ, ಇಮ್ಮಡಿ ಪುಲಕೇಶಿ ಸೇರಿದಂತೆ ಹಲವು , ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ್ದು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರು ನಾಗೇಶ್ ‘ಚಿತ್ರೀಕರಣದ ಸಮಯ ಸಹನಟರನ್ನು ಗೌರವದಿಂದ ಕಾಣುತ್ತಿದ್ದ ರಾಜಕುಮಾರ್ ಅವರಿಗೆ ಮೇರು ನಟ ಎಂಬ ಅಹಂ ಇರಲಿಲ್ಲ. ಸಿನಿಮಾಗಾಗಿ ಇಂಗ್ಲೀಷ್ ಪದಗಳನ್ನು ಕಲಿತು ‘ಆಪರೇಷನ್ ಡೈಮಂಡ್ ರಾಕೆಟ್’ ಚಿತ್ರದಲ್ಲಿ ಇಂಗ್ಲೀಷ್ ಗೀತೆಯನ್ನು ಸರಾಗವಾಗಿ ಹಾಡಿದ್ದರು. ‘ಎರಡುಕನಸು’ ಚಿತ್ರದಲ್ಲಿ ಪ್ರಾಧ್ಯಾಪಕರಾಗಿ ಶೇಕ್ಸಿಪಿಯರ್ ಪಾಠವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಡಾ.ರಾಜ್ ಹುಟ್ಟೂರಿನಲ್ಲಿ ಅವರ ಹೆಸರಿನಲ್ಲಿ ‘ಮುತ್ತುರಾಜು’ ಪ್ರಶಸ್ತಿ ಸ್ವೀಕರಿಸಿರುವುದು ಹೆಮ್ಮೆ ಹಾಗೂ ಸಂತೋಷ ತಂದಿದೆ ಎಂದರು.

ಈಶ್ವರಿ ಸೋಷಿಯಲ್ ಟ್ರಸ್ಟ್ ಸಂಸ್ಥಾಪಕ ಸಾಲುಮರದ ಸಿ.ಎಂ.ವೆಂಕಟೇಶ್ ಮಾತನಾಡಿ ಜಿಲ್ಲೆಯವರಾದ ಡಾ.ರಾಜ್ಕುಮಾರ್ ಜನ್ಮದಿನದ ಅಂಗವಾಗಿ ‘ಮುತ್ತುರಾಜು’ ಪ್ರಶಸ್ತಿಯನ್ನು ಪ್ರತಿವರ್ಷ ನೀಡಲಾಗುತ್ತಿದೆ. ಹಿಂದೆ ನಿರ್ದೇಶಕ ದೊರೆ ಭಗವಾನ್, ಭಾರ್ಗವ, ರಾಜನ್ ನಾಗೇಂದ್ರ, ರಾಜೇಶ್ ರಾಮನಾಥ್, ಕೃಷ್ಣ ಟಾಕೀಸ್ ಚಂದ್ರಪ್ಪ, ಹಿರಿಯ ನಟಿ ಲಕ್ಷ್ಮೀ ದೇವಿ ಅವರಿಗೆ ನೀಡಿ ಗೌರವಿಸಲಾಗಿದೆ ಎಂದರು.

ವೇದಿಕೆಯಲ್ಲಿ ಕ್ರೀಡಾಪಟು ಚಂದ್ರಶೇಖರ್, ಓಲೆ ಮಹದೇವು, ಉದ್ಯಮಿ ಮಹದೇವಸ್ವಾಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹತ್ತು ವರ್ಷಗಳಿಂದ ಸಾಲು ಗಿಡಮರಗಳ ಪೋಷಣೆಗೆ ದುಡಿದ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಡಾ.ರಾಜ್ ಕುಮಾರ್ ಸಿನಿಮಾ ಗೀತೆಗಳನ್ನು ಹಾಡಲಾಯಿತು. ವರ್ತಕರಾದ ಆರ್.ವಿ.ಶಾಂತಿ ಪ್ರಸಾದ್, ಜಿ.ಶೇಖರಮೂರ್ತಿ, ಅಂಕರಾಜು, ಮಂಜು, ಜಯಲಕ್ಷ್ಮೀ, ಹರಿಕೃಷ್ಣ, ನೀಲಕಂಠ, ಮಹಮದ್ಗೌಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-37-1141819203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.