ಎವರೆಸ್ಟ್ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ತಾವೇ ನಿರ್ಮಾಣ ಮಾಡಿ, ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ‘ಫ್ಲರ್ಟ್’ ಎಂದು ಹೆಸರಿಡಲಾಗಿದೆ. ‘ಇದು ನನ್ನ ಹತ್ತನೇ ಚಿತ್ರ. ವಿಭಿನ್ನವಾದ ಕಥೆಯೊಂದಿಗೆ ನಿರ್ದೇಶನಕ್ಕೆ ಇಳಿದಿರುವೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಗೊಂಡಿರುವ ಕಮರ್ಷಿಯಲ್ ಚಿತ್ರ. ಜೊತೆಗೆ ಫ್ಯಾಮಿಲಿ ಆಡಿಯನ್ಸ್‌ಗೆ ಅಗತ್ಯ ಅಂಶಗಳು, ಆ್ಯಕ್ಷನ್ ಕೂಡ ಇದೆ. ದೊಡ್ಡ ತಾರಾಗಣವಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಇನ್ನಷ್ಟು ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ ಚಂದನ್.