ಶುಕ್ರವಾರ, ಜುಲೈ 1, 2022
23 °C

ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ‘ಚಾರ್ಲಿ 777’ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ರಕ್ಷಿತ್‌ ಶೆಟ್ಟಿ ಜನ್ಮದಿನದಂದು ಬಿಡುಗಡೆಯಾದ ‘ಚಾರ್ಲಿ 777’ ಟೀಸರ್‌ ‘ಲೈಫ್‌ ಆಫ್‌ ಚಾರ್ಲಿ’ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿದೆ. ಐದು ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಚಿತ್ರದ ಟೀಸರ್‌ ಅನ್ನು ಪ್ರತಿ ಭಾಷೆಯಲ್ಲೂ 50 ಲಕ್ಷಕ್ಕೂ ಅಧಿಕ ವ್ಯೂವ್ಸ್‌ ಪಡೆದಿದೆ. ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಚಿತ್ರದ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

‘ಈ ಚಿತ್ರದ ಅನುಭವವನ್ನು ಚಿತ್ರಮಂದಿರದಲ್ಲೇ ವೀಕ್ಷಕರಿಗೆ ನೀಡಬೇಕು’ ಎಂದಿರುವ ರಕ್ಷಿತ್‌ ಶೆಟ್ಟಿ, ಬಿಡುಗಡೆ ದಿನಾಂಕ ನಿಗದಿ ಹಾಗೂ ಐದು ಭಾಷೆಗಳಲ್ಲೂ ವಿತರಕರು ಅಂತಿಮಗೊಂಡ ಬಳಿಕವಷ್ಟೇ ಟ್ರೇಲರ್‌ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ. ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಟ್‌ ತಾರಾಗಣದಲ್ಲಿದ್ದಾರೆ.

‘ಟೀಸರ್‌ಗೆ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೇರೆ ರಾಜ್ಯಗಳಿಂದಲೂ ಹಲವು ವಿತರಕರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಈ ಚಿತ್ರದ ನಿಜವಾದ ಹೀರೋ ನಿರ್ದೇಶಕ ಕಿರಣ್‌ರಾಜ್‌. ಅವರ ಬದ್ಧತೆ, ಆಸಕ್ತಿ, ಪರಿಶ್ರಮವೇ ಇಂದು ಈ ಸಿನಿಮಾವನ್ನು ಮಾಡಿದೆ. ಒಂದು ಪ್ರಾಣಿಯನ್ನು ಇಟ್ಟುಕೊಂಡು ಚಿತ್ರೀಕರಣ ನಡೆಸುವುದು ಸುಲಭವಲ್ಲ. ಚಿತ್ರದಲ್ಲಿ ಎರಡು ಚಾರ್ಲಿ ಇದ್ದು, ಇವುಗಳಿಗೆ ಮೈಸೂರಿನ ಪ್ರಮೋದ್‌ ತರಬೇತಿ ನೀಡಿದ್ದಾರೆ. ಪ್ರತಿ ದೃಶ್ಯಕ್ಕೂ 30–40 ಟೇಕ್‌ ಸಾಮಾನ್ಯವಾಗಿತ್ತು. ಇದು ಸವಾಲಿನಿಂದ ಕೂಡಿತ್ತು’ ಎಂದು ಚಿತ್ರೀಕರಣದ ಅನುಭವ ಹಂಚಿಕೊಳ್ಳುತ್ತಾರೆ ರಕ್ಷಿತ್‌ ಶೆಟ್ಟಿ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು