ಶನಿವಾರ, ಡಿಸೆಂಬರ್ 7, 2019
25 °C

ಚಾರ್ಲಿಸ್‌ ಏಂಜೆಲ್ಸ್‌ ಸಿನಿಮಾ ಈ ವಾರ

Published:
Updated:
Prajavani

ಅಮೆರಿಕದಲ್ಲಿ 1976ರಿಂದ 1981ರವರೆಗೆ ಪ್ರಸಾರವಾದ ಟಿ.ವಿ. ಧಾರಾವಾಹಿ ‘ಚಾರ್ಲಿಸ್‌ ಏಂಜಲ್ಸ್‌’. ಇದು ಜನಮೆಚ್ಚುಗೆ ಪಡೆದಿತ್ತು. ಇದರ ಒಟ್ಟು 110 ಕಂತುಗಳು ಪ್ರಸಾರವಾಗಿದ್ದವು.

ಕ್ರೈಂ–ಆ್ಯಕ್ಷನ್‌ ಮಾದರಿಯ ಈ ಧಾರಾವಾಹಿಯು ಸರಿಸುಮಾರು ಎರಡು ದಶಕಗಳ ನಂತರ ಸಿನಿಮಾ ರೂಪ ಪಡೆಯಿತು. 2000ನೇ ಇಸವಿಯಲ್ಲಿ ಮೆಕ್‌ಜಿ ಅವರು ಈ ಧಾರಾವಾಹಿಯ ಸಿನಿಮಾ ರೂಪವನ್ನು ‘ಚಾರ್ಲಿಸ್‌ ಏಂಜೆಲ್ಸ್‌’ ಹೆಸರಿನಲ್ಲೇ ತೆರೆಯ ಮೇಲೆ ತಂದರು. ಆ ಸಿನಿಮಾ ಆ್ಯಕ್ಷನ್–ಹಾಸ್ಯದ ಮಿಶ್ರಣವಾಗಿತ್ತು. ಅದಾದ ನಂತರ, 2003ರಲ್ಲಿ ‘ಚಾರ್ಲಿಸ್‌ ಏಂಜೆಲ್ಸ್‌: ಫುಲ್‌ ಥ್ರಾಟಲ್‌’ ಹೆಸರಿನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬಂತು. ಇದನ್ನೂ ಮೆಕ್‌ಜಿ ಅವರೇ ನಿರ್ದೇಶಿಸಿದ್ದರು.

ಈಗ ‘ಚಾರ್ಲಿಸ್‌ ಏಂಜೆಲ್ಸ್‌’ ಸಿನಿಮಾ ಹೊಸದೊಂದು ಅವತಾರದಲ್ಲಿ ಪುನಃ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿ ನಿಂತಿದೆ. ಈ ಚಿತ್ರವನ್ನು ಎಲಿಜಬೆತ್‌ ಬ್ಯಾಂಕ್ಸ್‌ ಅವರು ನಿರ್ದೇಶಿಸಿದ್ದು, ಇದು ಶುಕ್ರವಾರ (ನ. 15) ಭಾರತದಲ್ಲಿ ಕೂಡ ತೆರೆಗೆ ಬರಲಿದೆ. ಇದು ಚಾರ್ಲಿಸ್‌ ಏಂಜೆಲ್ಸ್‌ ಸರಣಿಯಲ್ಲಿ ಮೂರನೆಯ ಸಿನಿಮಾ.

ಈ ಚಿತ್ರದಲ್ಲಿ ಬರುವ ಏಂಜೆಲ್‌ಗಳು, ಅಂದರೆ ಮೂವರು ಯುವತಿಯರು, ಭಯವೆಂದರೆ ಏನೆಂದು ಗೊತ್ತಿಲ್ಲದವರು. ಈ ಮೂವರು ಚಾರ್ಲ್ಸ್‌ ಟೌನ್‌ಸೆಂಡ್‌ ಎಂಬಾತನಿಗಾಗಿ ಕೆಲಸ ಮಾಡುತ್ತಿರುತ್ತಾರೆ. ಈತನ ತನಿಖಾ ಸಂಸ್ಥೆಯಲ್ಲಿ ವಿಶ್ವದಾದ್ಯಂತ ಜಾಲ ವಿಸ್ತರಿಸಿಕೊಂಡಿರುತ್ತದೆ.

ಯುವ ಎಂಜಿನಿಯರ್‌ ಒಬ್ಬ ಸ್ವಾರ್ಥಕ್ಕಾಗಿ ಮಾಡುವ ಕೆಲಸವೊಂದು ಬೇರೆಯವರ ಪಾಲಿಗೆ ಅಪಾಯಕಾರಿ ಆಗಿ ಪರಿಣಮಿಸುತ್ತದೆ. ಆ ಎಂಜಿನಿಯರ್‌ ಅಪಾಯಕಾರಿ ತಂತ್ರಜ್ಞಾನವೊಂದರ ಬಳಕೆಗೆ ಮುಂದಾಗಿರುತ್ತಾರೆ. ಆಗ, ಜನರನ್ನು ಅಪಾಯದಿಂದ ರಕ್ಷಿಸಲು ಈ ಮೂವರು ಏಂಜೆಲ್‌ಗಳನ್ನು ನಿಯೋಜಿಸಲಾಗುತ್ತದೆ. ಇದು ಹೊಸ ಸಿನಿಮಾದ ಕಥೆಯ ಎಳೆ. ಇದನ್ನು ಕೇಳಿದಾಗ ಇದು ಸೈ–ಫೈ ಸಿನಿಮಾ ಇರಬೇಕು ಎಂದು ಅನ್ನಿಸುವುದು ಸಹಜ.

ಪ್ರತಿಕ್ರಿಯಿಸಿ (+)