‘ಡಿಯರ್ ಸತ್ಯ’ ಹಾಗೂ ‘ನೂರು ಜನ್ಮಕು’ ಸಿನಿಮಾಗಳ ಖ್ಯಾತಿಯ ಆರ್ಯನ್ ಸಂತೋಷ್ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು.

ನಿರ್ದೇಶನದ ಜೊತೆಗೆ ಆರ್ಯನ್ ಸಂತೋಷ್ ಅವರೇ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದು, ಸಿನಿಮಾದ ಟೀಸರ್ ಅನ್ನು ನಟ ಪ್ರಜ್ವಲ್ ದೇವರಾಜ್ ರಿಲೀಸ್ ಮಾಡಿದರು.

‘ಸ್ನೇಹಿತರ ಜೊತೆ ಕೇರಳದ ವಯನಾಡ್ನ ಕಾಡಿಗೆ ಹೋದಾಗ ಹೊಳೆದ ಕಥೆ ಇದು. ಅಲ್ಲೊಂದು ಶಿವಲಿಂಗ ನೋಡಿ ಈ ಕಥೆ ಸಿದ್ಧಪಡಿಸಿದೆ. ನಾನೇ ಈ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದೇನೆ. ಮನಸ್ವಿ ಮನು, ಶರಣ್ಯ, ಅಕ್ಷಿತಾ ಬೋಪಯ್ಯ ಹಾಗೂ ಪೂಜಾ ಶೆಟ್ಟಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಚೆಂಕೋಲ್’ ಎಂದರೆ ರಾಜದಂಡ. ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಮೊದಲ ಭಾಗದಲ್ಲಿ ನಾಯಕ ‘ಚೆಂಕೋಲ್’ ಬೆಟ್ಟಕ್ಕೆ ಹೋಗುವ ಪಯಣವಿದೆ. ಎರಡನೇ ಭಾಗದಲ್ಲಿ ಅಗಸ್ತ್ಯ ರಾಜನ ಕಥೆಯನ್ನು ಹೇಳಲಾಗಿದೆ. 1500 ವರ್ಷದ ಹಿಂದಿನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಕೇರಳ, ಚಿಕ್ಕಮಗಳೂರು, ಬೆಂಗಳೂರು, ತಮಿಳುನಾಡು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾ ಫ್ಯಾಂಟಸಿ ಡ್ರಾಮಾ ಕಥಾಹಂದರ ಹೊಂದಿದೆ’ ಎನ್ನುತ್ತಾರೆ ಆರ್ಯನ್ ಸಂತೋಷ್.

ವಿಂಟರ್ ಬ್ರಿಜ್ ಸ್ಟುಡಿಯೋಸ್ ಮತ್ತು ಪಿಕ್ಸಲ್ ಒರಿಜಿನಲ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಮಾನಸ್ವಿ ಮತ್ತು ಶರಣ್ಯ ನಾಯಕಿಯಾಗಿ ನಟಿಸಿದ್ದಾರೆ. ಅರುಣಾ ಬಾಲರಾಜ್, ಸುಂದರ್ ವೀಣಾ, ಅರವಿಂದ್ ರಾವ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಪಿನ್ ಡಿ ರಾಜ್ ಛಾಯಾಚಿತ್ರಗ್ರಹಣ, ಉಮೇಶ್ ಸಂಕಲನ, ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಹಾಡುಗಳಿಗೆ ಆಲ್ ಓಕೆ, ಜೋ ಕೋಸ್ಟಾ ಮತ್ತು ಗೌತಮ್ ದಾಸ್ ಸಂಗೀತ ನೀಡಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಈ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಿದೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-1534057851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.