ಮಕ್ಕಳ ಕಥೆಯನ್ನು ಹೊಂದಿರುವ ‘ಚಿಕ್ಕವರು ಕೋಣರಲ್ಲ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪ್ರಕಾಶ್ ಚಿನ್ನಪ್ಪ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಜತೆಗೆ ಬಂಡವಾಳವನ್ನೂ ಹೂಡಿದ್ದಾರೆ.

‘ಐದರಿಂದ ಹನ್ನೊಂದು ವರ್ಷದವರೆಗಿನ ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಆ ವಯಸ್ಸಿನ ಮಕ್ಕಳು ತುಂಬ ಬುದ್ಧಿಶಾಲಿಗಳು. ಅವರ ಚಿಂತನೆ, ರೀತಿ, ನೀತಿ ವಿಭಿನ್ನ. ಅವರಿಗೆ ಇಪ್ಪತ್ತು ವರ್ಷಗಳಾದಾಗ ಜಗತ್ತು ಯಾವ ರೀತಿ ಬದಲಾಗಿರುತ್ತದೆ ಎಂಬುದೇ ಕಥೆ. ಚಿತ್ರ ಬಿಡುಗಡೆಗೆ ಸಿದ್ಧವಿದೆ. ಸಾಗರ, ಹೊಸಬಾಳೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದರು ನಿರ್ದೇಶಕ.

ಬಾಲ ನಟರಾದ ಸೆಹರಿ, ತಿಷ್ಯ, ಹನ್ಸಿಕಾ, ಶ್ರೀವಾಸ್, ವಿಯಾನ್, ಶ್ರೀಗೌರಿ ಮತ್ತು ಶ್ರೀವಾಸ್, ರಮೇಶ್ ಭಟ್, ಸುಂದರ ರಾಜ್ ಹಾಗೂ ಅನಿತಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಸನ್ನ, ಚಂದ್ರಶೇಖರ ಭಟ್ ಸಾಹಿತ್ಯದ ಎರಡು ಹಾಡುಗಳಿಗೆ ಉತ್ತಮ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ರಿಷಿಕೇಶ್ ಛಾಯಾಚಿತ್ರಗ್ರಹಣ-ಸಂಕಲನವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-1923849157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.