ಬುಧವಾರ, ಜುಲೈ 28, 2021
21 °C

ಪ್ರೀತಿಯಿಂದ ಮಕ್ಕಳ ಕಿವಿ ಹಿಂಡುವ ಮೋದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶಾಖಪಟ್ಟಣದಲ್ಲಿ ನಡೆದ ಅಂತಾರಾಷ್ಟ್ರೀಯ ನೌಕಾಪಡೆ ಪುನರಾವಲೋಕನ (ಐಎಫ್‌ಆರ್‌) ಸಮಾರಂಭ ದಲ್ಲಿ ಕುಟುಂಬದೊಂದಿಗೆ ಭಾಗಿಯಾಗಿದ್ದರು ಅಕ್ಷಯ್ ಕುಮಾರ್. ಅದೇ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಪ್ರಧಾನಿಯೊಂದಿಗೆ ಫೋಟೊ ತೆಗೆಸಿಕೊಳ್ಳಲು ಹೋದಾಗ ಅಕ್ಷಯ್‌ ಮಗ ಆರವ್‌ನ ಕಿವಿ ಹಿಂಡಿ ಪೋಸ್‌ ಕೊಟ್ಟರು ಮೋದಿ... 

ಅವರಿಂದ ಕಿವಿ ಹಿಂಡಿಸಿಕೊಂಡವನು ಇವನೊಬ್ಬನೇ ಅಲ್ಲ, ತಮ್ಮನ್ನು ಭೇಟಿಯಾದ ಎಲ್ಲಾ ಮಕ್ಕಳಿಗೂ ಮೊದಲು ಕಿವಿ ಹಿಂಡಿ ಮುದ್ದು ಮಾಡುತ್ತಾರೆ ಮೋದಿ!

ಇತ್ತೀಚೆಗೆ ತಮ್ಮ 68ನೇ ಹುಟ್ಟುಹಬ್ಬವನ್ನು ವಾರಣಾಸಿಯಲ್ಲಿ ಆಚರಿಸಿಕೊಂಡ ನರೇಂದ್ರ ಮೋದಿಯವರು, ಮಕ್ಕಳೊಂದಿಗೆ ಕಳೆದ ಮಧುರ ಕ್ಷಣಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೊದಲ್ಲೂ ಬಾಲಕನ ಕಿವಿ ಹಿಂಡುತ್ತಾ ತುಂಟ ನಗು ಬೀರಿದ್ದರು. ಈ ಫೋಟೊಗೆ ‘ನನ್ನ ಯುವ ಮಿತ್ರರು ಮತ್ತು ನಾನು’ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ಈ ಫೋಟೊ  ’ಕಾನ್‌ ಕಿ ಬಾತ್‘ ಹೆಸರಿನಲ್ಲಿ ವೈರಲ್ ಆಗಿತ್ತು. 

ಹಾಗೇ ಕೆನಡಾ ಪ್ರಧಾನಿ ಜಸ್ಟೀನ್ ಟ್ರಾಡೊ ಅವರ ಮಗಳು ಎಲಾಗ್ರೇಸ್‌ ಕಿವಿಯನ್ನು ಮುದ್ದಿನಿಂದ ಹಿಂಡಿ ತೆಗೆಸಿಕೊಂಡಿ ರುವ ಫೋಟೊವನ್ನು ಟ್ವೀಟ್ ಮಾಡಿ ’ಜಸ್ಟೀನ್ ಟ್ರಾಡೋ ಭಾರತ ಭೇಟಿಯನ್ನು ಆನಂದದಿಂದ ಕಳೆದರು. ಅವರ ಮಕ್ಕಳಾದ ಕ್ಸೇವಿಯರ್, ಎಲಾಗ್ರೇಸ್ ಮತ್ತು ಹ್ಯಾಡ್ರಿಯನ್‌ರನ್ನು ಭೇಟಿ ಮಾಡಲು ಕಾಯುತ್ತಿದ್ದೇನೆ. ಕಳೆದ ಬಾರಿ ನಾನು ಕೆನಡಾಗೆ ಭೇಟಿ ನೀಡಿದ್ದಾಗ ತೆಗೆಸಿಕೊಂಡ ಫೋಟೊ ಇದು‘ ಎಂದು ಟ್ವೀಟ್‌ ಮಾಡಿದ್ದರು. 

ಈ ಫೋಟೊ ಕೂಡ ವೈರಲ್ ಆಗಿ ಅಪಾರ ಮೆಚ್ಚುಗೆ ಪಡೆದಿತ್ತು. ಈ ಟ್ವೀಟ್‌ಗೆ ಪ್ರಧಾನಿ ಜಸ್ಟೀನ್ ಟ್ರಾಡೊ ’ಮರೆಯಲು ಅಸಾಧ್ಯ‘ ಎಂದು ಉತ್ತರಿಸಿದ್ದರು.

ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಪ್ರಶಸ್ತಿ ಪುರಸ್ಕೃತ ರಿಪಾ ದಾಸ್ ಅವರ ಕಿವಿಯನ್ನು ಹಿಂಡಿ ಶಬಾಷ್‌ ಎಂದಿದ್ದರು. 2014 ಜಪಾನ್ ಪ್ರವಾಸದ ಸಂದರ್ಭದಲ್ಲೂ ಟೊಕಿಯೊ ಗೋಲ್ಡನ್ ಟೆಂಪಲ್‌ನಲ್ಲಿ ಹುಡುಗನೊಬ್ಬನ ಕಿವಿ ಹಿಂಡುತ್ತಾ ಮಾತನಾಡಿಸಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿತ್ತು. 

ಕಿವಿ ಹಿಂಡಿ ಮಕ್ಕಳ ಮುದ್ದಿಸುವ ಇವರ ಪರಿ ಪ್ರತಿಬಾರಿ ವೈರಲ್ ಆಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು