ಶುಕ್ರವಾರ, ಡಿಸೆಂಬರ್ 13, 2019
26 °C

ಗೋವಾದಲ್ಲಿ ಚೂಡಿ ಶಿವರಾಂ ಸಾಕ್ಷ್ಯಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೂಡಿ ಶಿವರಾಂ ನಿರ್ದೇಶನದ ‘ಎಟ್ ದಿ ಆಲ್ಟರ್ ಆಫ್ ಇಂಡಿಯಾಸ್ ಫ್ರೀಡಂ’ ಸಾಕ್ಷ್ಯಚಿತ್ರವು ಗೋವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶನಿವಾರ ಪ್ರದರ್ಶನ ಕಾಣಲಿದೆ.

30 ನಿಮಿಷಗಳ ಈ ಸಾಕ್ಷ್ಯಚಿತ್ರವು ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ 2018ರಲ್ಲಿ ಪ್ರದರ್ಶನ ಕಂಡಿತ್ತು. ಮಲೇಷ್ಯಾದಲ್ಲಿನ ಭಾರತೀಯರು, ಭಾರತದಿಂದ ದೂರ ಇದ್ದೂ ಸ್ವಾತಂತ್ರ್ಯಕ್ಕಾಗಿ ಹೇಗೆ ಹೋರಾಟ ನಡೆಸಿದರು ಎಂಬುದು ಈ ಸಾಕ್ಷ್ಯಚಿತ್ರದ ವಸ್ತು.

‘ಮಲೇಷ್ಯಾದಲ್ಲಿನ ಭಾರತೀಯರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಗೆಯನ್ನು ಇದು ತೋರಿಸುತ್ತದೆ. ಇದು ಭಾರತದ ಇತಿಹಾಸದಲ್ಲಿ ಮಹತ್ವದ್ದು. ಆದರೆ ಅವರ ಹೋರಾಟಕ್ಕೆ ಸೂಕ್ತ ಮಾನ್ಯತೆ ದೊರೆತಿಲ್ಲ’ ಎಂಬುದು ಚಿತ್ರತಂಡದ ಹೇಳಿಕೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು