ಭಾನುವಾರ, ನವೆಂಬರ್ 17, 2019
21 °C

ಚಿತ್ರೀಕರಣ | ಬ್ಯಾಂಕಾಕ್‌ನಲ್ಲಿ ಕಾಣೆಯಾದವರು...

Published:
Updated:

ಬಿಲ್ವ ಎಂಟರ್‌ಟೈನ್‍ಮೆಂಟ್ ಲಾಂಛನದಡಿ ನವೀನ್ ಕುಮಾರ್ ಜಿ.ಆರ್. ಬಂಡವಾಳ ಹೂಡಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದ ಪ್ರಥಮ ಹಂತದ ಶೂಟಿಂಗ್‌ ಬ್ಯಾಂಕಾಕ್‍ನಲ್ಲಿ ಮುಕ್ತಾಯವಾಗಿದೆ. ನಟರಾದ ರವಿಶಂಕರ್, ರಂಗಾಯಣ ರಘು, ಚಿಕ್ಕಣ್ಣ, ತಬಲ ನಾಣಿ ಈ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. 

ಎರಡನೇ ಹಂತದ ಚಿತ್ರೀಕರಣ ಶೀಘ್ರವೇ ಆರಂಭವಾಗುವ ನಿರೀಕ್ಷೆಯಿದೆ. ಅನಿಲ್‌ ಕುಮಾರ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಈ ಹಿಂದೆ ಅವರು ‘ಶಕ್ತಿ’, ‘ದಿಲ್‍ವಾಲ’, ‘ಕೃಷ್ಣ ರುಕ್ಕು’, ‘ರ‍್ಯಾಂಬೋ 2’, ‘ಕಿರಾತಕ 2’ ಮತ್ತು ‘ದಾರಿ ತಪ್ಪಿದ ಮಗ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

ಬಾಳಿನ ಮುಸ್ಸಂಜೆಯಲ್ಲಿರುವವರ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆಯಂತೆ. ಚಿತ್ರದ ನಾಲ್ಕು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಶಿವಕುಮಾರ್ ಬಿ.ಕೆ. ಅವರದು. ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರತಿಕ್ರಿಯಿಸಿ (+)