ಶನಿವಾರ, ಅಕ್ಟೋಬರ್ 16, 2021
29 °C

ಚಿತ್ರಮಂದಿರದವರು ಉಚಿತವಾಗಿ ಶುದ್ಧ ಕುಡಿಯುವ ನೀರು ನೀಡಬೇಕು: ಮದ್ರಾಸ್‌ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಚಿತ್ರಮಂದಿರದವರು ಪ್ರೇಕ್ಷಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ಕೊಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಸೂಚಿಸಿದೆ.

’ಚಿತ್ರಮಂದಿರದೊಳಗೆ ಕುಡಿಯುವ ನೀರು ತೆಗೆದುಕೊಂಡು ಹೋಗಲು ಜನರಿಗೆ ಅನುಮತಿ ನೀಡಬೇಕು, ಇಲ್ಲವಾದಲ್ಲಿ ಚಿತ್ರಮಂದಿರದವರೇ ಜನರಿಗೆ ಶುದ್ಧ ಕುಡಿಯುವ ನೀರು ನೀಡಬೇಕು. ಇದಕ್ಕೆ ಹಣ ಪಡೆಯುವಂತಿಲ್ಲ’ ಎಂದು ಮದ್ರಾಸ್‌ ಹೈಕೋರ್ಟ್ ಹೇಳಿದೆ. 

2016ರಲ್ಲಿ ತಮಿಳುನಾಡಿನ ದೇವರಾಜನ್ ಎಂಬುವರು ಚಿತ್ರಮಂದಿರಗಳಲ್ಲಿ ಕುಡಿಯುವ ನೀರು, ತಿಂಡಿಗಳ ಬೆಲೆ ಏರಿಕೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮಾರುಕಟ್ಟೆಯಲ್ಲಿ ದೊರೆಯುವುದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಚಿತ್ರಮಂದಿರಗಳ ಮಾಲೀಕರು ಭದ್ರತೆ ಕಾರಣಗಳಿಗಾಗಿ ಜನರು ಹೊರಗಿನಿಂದ ಕುಡಿಯುವ ನೀರು ಸೇರಿದಂತೆ, ಆಹಾರ ತರುವುದನ್ನು ನಿಷೇಧಿಸಲಾಗಿದೆ ಎಂದು ವಾದಿಸಿದ್ದರು. ನೀವು ಕುಡಿಯುವ ನೀರು ತರಲು ಅವಕಾಶ ನೀಡದಿದ್ದರೆ, ನೀವೆ ನೀರು ಕೊಡಬೇಕು ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಸುಬ್ರಮಣ್ಯಂ ಈ ತೀರ್ಪು ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು