‘ಮೆಜೆಸ್ಟಿಕ್-2’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಭರತ್‌ಕುಮಾರ್, ಆ ಚಿತ್ರದ ಶೂಟಿಂಗ್ ಮುಗಿಯುವ ಮೊದಲೇ ಇನ್ನೊಂದು ಚಿತ್ರದಲ್ಲಿ ನಾಯಕನಾಗಿದ್ದಾರೆ. ಇತ್ತೀಚೆಗಷ್ಟೇ ಸೆಟ್ಟೇರಿರುವ ಚಿತ್ರಕ್ಕೆ ‘ಲವ್ ಈಸ್ ಲೈಫ್’ ಎಂದು ಹೆಸರಿಡಲಾಗಿದೆ. ಅಂಬಿಗಾ ಕ್ರಿಯೇಶನ್ಸ್ ಮೂಲಕ ಜಿ.ಡಿ. ಸಂತೋಷ್ ಕುಮಾರ್ ಹಾಗೂ ಎನ್.ಹನುಮಂತ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಜಿ.ಶಿವರಾಜ್ ಅವರ ಕಥೆ, ಚಿತ್ರಕಥೆ, ನಿರ್ದೇಶನವಿದೆ.