‘ನೀ ಇಲ್ಲದ ಹೃದಯ’ಕ್ಕೆ ಚಾಲನೆ

ಬುಧವಾರ, ಜೂನ್ 19, 2019
22 °C

‘ನೀ ಇಲ್ಲದ ಹೃದಯ’ಕ್ಕೆ ಚಾಲನೆ

Published:
Updated:

ಬಾಗಲಕೋಟೆಯ ಪಿ.ಎಚ್. ಸಂತೋಷ್ ಮತ್ತು ಹಾವೇರಿಯ ಬಸವರಾಜು ಎಚ್. ಜಕ್ಕಪ್ಪನವರ್ ನಿರ್ಮಾಣದ ‘ನೀ ಇಲ್ಲದ ಹೃದಯ’ ಚಿತ್ರದ ಮುಹೂರ್ತ ಸಮಾರಂಭ ಅರೆಕೆರೆಯ ಸಾಯಿಬಾಬಾ ದೇವಸ್ಥಾನದಲ್ಲಿ ನಡೆಯಿತು.

ನಾಯಕ, ನಾಯಕಿ ದೇವರಿಗೆ ನಮಸ್ಕರಿಸುವ ದೃಶ್ಯಕ್ಕೆ ದಿಲ್‍ಸತ್ಯಾ ಕ್ಯಾಮೆರಾ ಆನ್ ಮಾಡಿದರೆ, ಬೆತ್ತನಕರೆಯ ಬಿ.ಜಿ. ಮೋಹನ್‍ ಗೌಡ ಕ್ಲಾಪ್ ಮಾಡಿ ಶುಭ ಹಾರೈಸಿದರು.

ಇಬ್ಬರು ಹುಡುಗಿಯರು, ಒಬ್ಬ ಹುಡುಗನ ಪ್ರೇಮ ಕತೆಗಳು ಸಿನಿಮಾ ರೂಪದಲ್ಲಿ ಹಲವಷ್ಟು ಬಂದಿವೆ. ‘ಈ ಸಿನಿಮಾದಲ್ಲಿಯೂ ಮೇಲೆ ಹೇಳಿದ ರೀತಿಯ ಕತೆಯೇ ಇದ್ದರೂ, ನಿರೂಪಣೆ ಶೈಲಿ ಬೇರೆ ರೀತಿಯಲ್ಲಿ ಇರುತ್ತದೆ’ ಎಂದು ಹೇಳಿದ್ದಾರೆ ನಿರ್ದೇಶಕ ಮಂಜು ಅಮ್ಮನಪುರ.

‘ಹುಡುಗ, ಹುಡುಗಿಯರಲ್ಲಿ ಒಳ್ಳೆಯವರು– ಕೆಟ್ಟವರು ಇದ್ದೇ ಇರುತ್ತಾರೆ. ನಾಯಕ ಒಬ್ಬಳು ಹುಡುಗಿಯನ್ನು ಪ್ರೀತಿಸುತ್ತಾನೆ. ಆಕೆ ಕೈಕೊಟ್ಟಾಗ, ಎಲ್ಲರದೂ ಇದೇ ಗುಣವೆಂದು ಹೆಣ್ಣುಮಕ್ಕಳಿಂದ ದೂರ ಇರುತ್ತಾನೆ. ಒಮ್ಮೆ ಪ್ರವಾಸಕ್ಕೆಂದು ಮಲೆನಾಡಿನ ಕಡೆ ಹೋದಾಗ ಅಲ್ಲೊಬ್ಬಳು ಹುಡುಗಿಯ ಪರಿಚಯವಾಗುತ್ತದೆ. ಇವನ ನಡತೆ ಕಂಡು ಆಕೆ ಇವನನ್ನು ಪ್ರೀತಿಸಲು ಶುರು ಮಾಡುತ್ತಾಳೆ. ಆದರೆ ಆ ಹುಡುಗನ ಕಡೆಯಿಂದ ಸೂಕ್ತ ಸ್ಪಂದನೆ ಸಿಗುವುದಿಲ್ಲ. ಆಕೆಯ ಪ್ರೀತಿಗೆ ಜಯ ಸಿಗುತ್ತದಾ ಎಂಬುದು ಚಿತ್ರದ ಸಾರಾಂಶ’ ಎಂದು ಸಿನಿಮಾ ತಂಡ ಹೇಳಿದೆ.

ರಂಜನ್‍ ಹಾಸನ್ ಈ ಚಿತ್ರದ ನಾಯಕ. ಶುಭಾ ರಕ್ಷಾ ನಾಯಕಿ. ಮತ್ತೊಬ್ಬಳು ನಾಯಕಿಗಾಗಿ ಹುಡುಕಾಟ ನಡೆದಿದೆಯಂತೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !