‘ಗಿರ್‌ಗಿಟ್’ ತುಳು ಚಿತ್ರಗಳ ಪೈಕಿ ಯಶಸ್ವಿಯಾದ ಹಾಸ್ಯಮಯ ಚಿತ್ರ. ಈಗ ಅದೇ ತಂಡದವರು ‘ಸರ್ಕಸ್’ ಆರಂಭಿಸಿದ್ದಾರೆ. ‘ಸರ್ಕಸ್’ ಶೀರ್ಷಿಕೆ ಕನ್ನಡದಲ್ಲಿ ಈಗಾಗಲೇ ಯಶಸ್ವಿಯಾದ ಚಿತ್ರದಹೆಸರು. ಹಿಂದಿಯಲ್ಲೂ ಮುಂದಿನ ವರ್ಷ ಇದೇ ಹೆಸರಿನ ಚಿತ್ರವೊಂದು ತೆರೆ ಕಾಣಲಿದೆ. ಈ ಮಧ್ಯೆ ತುಳುವಿನಲ್ಲೊಂದು ಚಿತ್ರ ಇತ್ತೀಚೆಗೆ ಸೆಟ್ಟೇರಿದೆ.

ತುಳು ಚಿತ್ರಗಳ ಸಾಮಾನ್ಯ ಪ್ರಕಾರವೇ ಹಾಸ್ಯ. ‘ಸರ್ಕಸ್’ನಲ್ಲೂ ಅದೇ ಪ್ರಧಾನ ವಸ್ತು. ರೂಪೇಶ್ ಶೆಟ್ಟಿ ನಿರ್ದೇಶಿಸಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ರೂಪೇಶ್ ಜೊತೆ ರಾಕೇಶ್ ಕದ್ರಿ ಸಹ ನಿರ್ದೇಶಕರು. ಹೊಸ ಮುಖ ರಚನಾ ರೈ ನಾಯಕಿ. ಯಶ್ ಶೆಟ್ಟಿ ಖಳ ಪಾತ್ರದಲ್ಲಿ ಇದ್ದಾರೆ.

ಉಳಿದಂತೆ ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಪ್ರಸನ್ನ ಶೆಟ್ಟಿ ಬೈಲೂರು ತಾರಾಗಣದಲ್ಲಿದ್ದಾರೆ. ಜ. 14ರವರೆಗೆ ಟಾಕಿ ಭಾಗದ ಚಿತ್ರೀಕರಣ ನಡೆಯಲಿದೆ. ಬಳಿಕ ಹಾಡುಗಳ ಚಿತ್ರೀಕರಣ ನಡೆಯಲಿದೆ. ಒಟ್ಟು 23 ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.