‘ದುನಿಯಾ’ ವಿಜಯ್ ನಿರ್ದೇಶಿಸಿರುವ, ವಿನಯ್ ರಾಜ್ಕುಮಾರ್ ನಟನೆಯ ‘ಸಿಟಿ ಲೈಟ್ಸ್’ ಚಿತ್ರದ ಮೊದಲ ಹಾಡು ‘ಬವ ಬವ’ ಮೇ 6ರಂದು ಬಿಡುಗಡೆಯಾಗಲಿದೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಜಯ್ ಮಾಹಿತಿ ನೀಡಿದ್ದಾರೆ. ‘ಸಲಗ’, ‘ಭೀಮ’ ಮೂಲಕ ನಿರ್ದೇಶಕರಾಗಿ ಯಶಸ್ಸು ಕಂಡಿರುವ ವಿಜಯ್ ಅವರ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ. ಈ ಚಿತ್ರದ ಮೂಲಕ ತಮ್ಮ ಕಿರಿಯ ಪುತ್ರಿ ಮೋನಿಷಾ ವಿಜಯ್ಕುಮಾರ್ ಅವರನ್ನು ಚಿತ್ರರಂಗಕ್ಕೆ ವಿಜಯ್ ಪರಿಚಯಿಸುತ್ತಿದ್ದಾರೆ. ಅವರ ಹಿರಿಯ ಪುತ್ರಿ ರಿತನ್ಯಾ ‘ಲ್ಯಾಂಡ್ ಲಾರ್ಡ್’ ಸಿನಿಮಾ ಮೂಲಕ ಈಗಾಗಲೇ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಾಗಿದೆ. ‘ಸಿಟಿ ಲೈಟ್ಸ್’ನಲ್ಲಿ ವಿನಯ್ಗೆ ಜೋಡಿಯಾಗಿ ಮೋನಿಷಾ ನಟಿಸಿದ್ದಾರೆ.

ಚಿತ್ರಕ್ಕೆ ‘ಜವಾಬ್ ದಾರಿ...ದೀಪಗಳು’ ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವ ಕಥೆ ಚಿತ್ರದಲ್ಲಿದೆ. ಚಿತ್ರಕ್ಕೆ ಶಿವಸೇನಾ ಮತ್ತು ಹರ್ಷಗೌಡ ಛಾಯಾಚಿತ್ರಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತವಿದೆ. ಕಾಕ್ರೋಚ್ ಸುಧಿ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.