ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಷರತ್ತು ಬದ್ಧ ಅನುಮತಿ

Last Updated 24 ಜೂನ್ 2020, 8:31 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ಮತ್ತು ಟಿವಿ ಧಾರವಾಹಿಗಳ ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ, ಪ್ರೀ ಮತ್ತು ಪೋಸ್ಟ್‌ ಪ್ರೊಡಕ್ಷನ್‌ಗೆ ಸಂಬಂಧಿಸಿದಂತೆ ಸರ್ಕಾರ ಮಾರ್ಗ ಸೂಚಿಯನ್ನು ಹೊರಡಿಸಿದೆ.

ಎಡಿಟಿಂಗ್‌, ಡಬ್ಬಿಂಗ್‌, ಸೌಂಡ್‌ ಮಿಕ್ಸಿಂಗ್‌, ವಿಷುವಲ್‌ ಎಫೆಕ್ಟ್‌, ಸಿಜಿ(ಕಂಪ್ಯೂಟರ್‌ ಗ್ರಾಫಿಕ್, ಡಿಜಿಟಲ್‌ ಇಂಟರ್‌ಮೀಡಿಯೇಟ್‌ ಕಲರ್‌ ಕರೆಕ್ಷನ್‌) ಮತ್ತು ಎಲ್ಲ ಇತರ ಪೋಸ್ಟ್‌ ಪ್ರೊಡಕ್ಷನ್‌, ಸ್ಕ್ರಿಪ್ಟ್‌ ಸೆಷನ್‌/ ಪ್ರೊಡಕ್ಷನ್‌ ಪ್ಲಾನಿಂಗ್‌ಗಳನ್ನು ಅಂತರ ಕಾಯ್ದುಕೊಂಡು ಮಾಡಬೇಕು. ಕನಿಷ್ಠ ಇಬ್ಬರು, ಗರಿಷ್ಠ 10 ಜನರನ್ನು ಮೀರಬಾರದು ಎಂದು ತಿಳಿಸಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು:60 ವರ್ಷ ದಾಟಿದವರು, ಗರ್ಭಿಣಿಯರು, ಅನಾರೋಗ್ಯಕ್ಕೆ ತುತ್ತಾದವರು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ನೇರ ಸಂಪರ್ಕ ಬಾರದಂತೆ ಎಚ್ಚರಿಕೆ ವಹಿಸಬೇಕು. 10 ವರ್ಷದ ಒಳಗಿನವರು ಮತ್ತು 60 ವರ್ಷ ಮೇಲ್ಪಟ್ಟವರು ವೈದ್ಯಕೀಯ ಪ್ರಮಾಣ ಪತ್ರ ಇಲ್ಲದೇ ಸೆಟ್‌ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು.

ದೊಡ್ಡ ಕೂಟಗಳು ಮತ್ತು ಸಭೆಗಳನ್ನು ಆಯೋಜಿಸಬಾರದು. ಸ್ಟುಡಿಯೋ ಆವರಣದಲ್ಲಿ ಯಾರಿಗೂ ಉಳಿಯಲು ಅವಕಾಶ ನೀಡಬಾರದು.

ಬಹುಪಾಲು ಚಿತ್ರೀಕರಣವನ್ನು ಸೆಟ್‌ ಒಳಗೇ ಮಾಡಬೇಕು. ಹೊರಾಂಗಣ ಚಿತ್ರೀಕರಣವನ್ನು ಆದಷ್ಟು ತಪ್ಪಿಸಬೇಕು. ಕಿರಿಯ ಕಲಾವಿದರ ಸಂಖ್ತೆಯನ್ನು ಆದಷ್ಟು ಕಡಿಮೆ ಮಾಡಬೇಕು.

ಕಂಟೈನ್‌ಮೆಂಟ್‌ ವಲಯದಲ್ಲಿ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಈ ವಲಯಗಳಲ್ಲಿ ಇರುವ ಕಲಾವಿದರು ಚಿತ್ರೀಕರಣ ಮತ್ತು ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT