ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಭೀತಿ : ಪ್ಯಾರಿಸ್‌ಗೆ ದೀಪಿಕಾ ಗೈರು

Last Updated 4 ಮಾರ್ಚ್ 2020, 10:22 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಭೀತಿ ಬಾಲಿವುಡ್‌ ಅಂಗಳಕ್ಕೂ ಬಂದಿದೆ. 2020ರ ಪ್ಯಾರಿಸ್‌ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಬೇಕಿದ್ದು ದೀಪಿಕಾ ಪಡುಕೋಣೆ ತಮ್ಮ ಪ್ರಯಾಣ ಮೊಟಕುಗೊಳಿಸಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ದೀಪಿಕಾ. ‘ಎಲ್ಲರಿಗೂ ಚಿಯರ್ಸ್‌, ಕಾರ್ಯಕ್ರಮವನ್ನು ನೀವು ಎಂಜಾಯ್‌ ಮಾಡಿ. ನನಗೆ ಬರಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ. ಅವರ ಬರಹಕ್ಕೆ ವಸ್ತ್ರವಿನ್ಯಾಸಕರಾದ ನಿಕೋಲಸ್ ಗೆಸ್‌ಕ್ವಿಯರ್ ಹಾಗೂ ಲೂಯಿ ವಿಟಾನ್ ಅವರನ್ನು ಟ್ಯಾಗ್‌ ಮಾಡಿದ್ದಾರೆ.

ದೀಪಿಕಾ ಪ್ರಯಾಣದ ಬಗ್ಗೆ ಅವರ ವಕ್ತಾರರು ಮಾತನಾಡಿದ್ದು ‘ಲೂಯಿ ವಿಟಾನ್ ಅವರ 2020 ಫ್ಯಾಷನ್ ವೀಕ್‌ನಲ್ಲಿ ದೀಪಿಕಾ ಭಾಗವಹಿಸುತ್ತಿಲ್ಲ. ಫ್ಯಾರಿಸ್‌ನಲ್ಲಿ ಕೊರೊನಾ ವೈರಸ್ ಸೊಂಕು ಇರುವ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಈ ಹಿಂದೆ ಹಲವಾರು ಬಾರಿ ಗಾಲಾ, ಕೆನಾನ್ಸ್‌ ಫಿಲಂ ಫೆಸ್ಟಿವಲ್‌ನಂತಹ ಪ್ರತಿಷ್ಠಿತ ಫ್ಯಾಷನ್‌ ಷೋಗಳಲ್ಲಿ ದೀಪಿಕಾ ಭಾಗವಹಿಸಿದ್ದರು. ಈ ಬಾರಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT