ಈ ವಾರ ತೆರೆಗೆ: ಗಿಣಿ ಹೇಳಿದ ಕಥೆ

7

ಈ ವಾರ ತೆರೆಗೆ: ಗಿಣಿ ಹೇಳಿದ ಕಥೆ

Published:
Updated:

ಬುದ್ಧ ಚಿತ್ರಾಲಯ ಲಾಂಛನದಲ್ಲಿ ವಿ. ದೇವರಾಜು ನಿರ್ಮಿಸಿರುವ ಚಿತ್ರ ಇದು. ನಾಗರಾಜ ಉಪ್ಪುಂದ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಹಿತನ್ ಹಾಸನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ ದೇವ್ ಅವರದು. ಚಿತ್ರದ ನಾಯಕನೂ ದೇವ್ ಅವರೇ. ಗೀತಾಂಜಲಿ, ಮಾಲತೇಶ್, ನೀತು ರಾಯ್, ಹಾವೇರಿ ಶ್ರೀಧರ್, ಮಹಾಂತೇಶ್‌ ಮುಖ್ಯಭೂಮಿಕೆಯಲ್ಲಿ ಇದ್ದಾರೆ. 

ಲಂಬೋದರ

ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ. ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿರುವ ಚಿತ್ರವಿದು.

ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ‘ಬಸವನಗುಡಿ ಬೆಂಗಳೂರು’ ಎಂಬ ಅಡಿಬರಹವಿದೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ. ಕೆ. ಕೃಷ್ಣರಾಜ್ ಹಾಗೂ ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಆಕಾಂಕ್ಷ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ, ಭೂಮಿಕಾ ಶೆಟ್ಟಿ ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !