ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇದೀಗ ಹೊಸ ಪ್ರಯತ್ನ ಒಂದಕ್ಕೆ ಕೈಹಾಕಿದ್ದಾರೆ. ಅವರು ಬಂಗಾಳಿ ಭಾಷೆಯಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ನಿರೂಪಕನಾಗಿ ನಡೆಸಿಕೊಡಲಿದ್ದಾರೆ.

ಕ್ರಿಕೆಟ್ ಆಟಗಾರನೊಬ್ಬ ಇದೇ ಮೊದಲ ಬಾರಿಗೆ ಬಿಗ್ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವ ದಾಖಲೆಯನ್ನೂ ಕೂಡ ಅವರು ತಮ್ಮದಾಗಿಸಿಕೊಂಡಿದ್ದಾರೆ.
.ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಅನ್ನು IPLಗೆ ಹೋಲಿಸಿದ ಸೌರವ್ ಗಂಗೂಲಿ.ಮೆಸ್ಸಿ ಕಾರ್ಯಕ್ರಮ ಅವ್ಯವಸ್ಥೆ: ₹50 ಕೋಟಿ ಮಾನನಷ್ಟ ದಾವೆ ಹೂಡಿದ ಸೌರವ್ ಗಂಗೂಲಿ.
ಪ್ರೇಕ್ಷಕರಿಂದ ಮನ್ನಣೆ ಪಡೆದಿರುವ ಬಿಗ್ಬಾಸ್ ರಿಯಾಲಿಟಿ ಶೋ ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಕನ್ನಡ ಭಾಷೆಯಲ್ಲಿ ನಟ ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಾರೆ. ಮಲಯಾಳದಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ನಾಗಾರ್ಜುನ್, ಹಿಂದಿಯಲ್ಲಿ ಸಲ್ಮಾನ್ ಖಾನ್ ಹಾಗೂ ತಮಿಳು ಭಾಷೆಯ ಕಾರ್ಯಕ್ರಮವನ್ನು ವಿಜಯ್ ಸೇತುಪತಿ ನಡೆಸಿಕೊಡುತ್ತಿದ್ದಾರೆ.

ಬಂಗಾಳಿ ಭಾಷೆಯಲ್ಲಿ ಬಿಗ್ಬಾಸ್ನ ಮೊದಲ ಸೀಸನ್ 2013ರಲ್ಲಿ ಆರಂಭವಾಗಿತ್ತು. ಆ ಸಮಯದಲ್ಲಿ ಮಿಥುನ್ ಚಕ್ರವರ್ತಿ ಬಿಗ್ಬಾಸ್ ನಡೆಸಿಕೊಡುತ್ತಿದ್ದರು. ನಂತರ 2016ರಲ್ಲಿ ಜೀತ್ ನಿರೂಪಕರಾದರು.

ಕ್ರಮೇಣ ಆ ಕಾರ್ಯಕ್ರಮ ಅಷ್ಟಕ್ಕಾಗಿ ಯಶಸ್ಸು ಕಾಣದಿರುವುದರಿಂದ ಮುಂದಿನ ಸೀಸನ್ಗಳಲ್ಲಿ ಕೈಬಿಡಲಾಯಿತು. ಇದೀಗ ಮತ್ತೊಮ್ಮೆ 10 ವರ್ಷಗಳ ನಂತರ ಬಂಗಾಳಿ ಭಾಷೆಯಲ್ಲಿ ಬಿಗ್ ಬಾಸ್ ಬಾಂಗ್ಲಾ ಆರಂಭವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.