ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರ್ಫಾನ್‌ ಪಠಾಣ್‌ ನಟನೆಗೆ

Last Updated 11 ನವೆಂಬರ್ 2019, 19:39 IST
ಅಕ್ಷರ ಗಾತ್ರ

ಕ್ರಿಕೆಟಿಗ ಇರ್ಫಾನ್‌ ಪಠಾಣ್‌, ನಿರ್ದೇಶಕ ಅಜಯ್‌ ಜ್ಞಾನಮುತ್ತು ನಿರ್ದೇಶನದ ಬಹುನಿರೀಕ್ಷಿತ ಮುಂದಿನ ಚಿತ್ರದಲ್ಲಿ ಸ್ಟೈಲಿಶ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇರ್ಫಾನ್‌ ಅಭಿನಯದ ಭಾಗ, ಸಿನಿಮಾದ ಮೊದಲ ಹಂತದ ಚಿತ್ರೀಕರಣವು ಇತ್ತೀಚೆಗೆ ಮುಗಿದಿದೆ.

ಈ ಚಿತ್ರ ವಿಕ್ರಮ್‌ ಅಭಿನಯದ 58ನೇ ಚಿತ್ರ. ಈ ಚಿತ್ರದ ಮೂಲಕ ಇರ್ಫಾನ್‌ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತಮಿಳು ಜನರಿಗೆ ಧನ್ಯವಾದವನ್ನು ಇರ್ಫಾನ್‌ ತಿಳಿಸಿದ್ದಾರೆ. ಅದಲ್ಲದೇ ಸಿನಿಮಾ ಸೆಟ್‌ನ ಫೋಟೊವೊಂದನ್ನು ಅವರು ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ದೃಶ್ಯದ ಚಿತ್ರೀಕರಣಕ್ಕೆ ಮುನ್ನ ನಿರ್ದೇಶಕ ಅಜಯ್‌ ಅವರಿಂದ ಸಲಹೆ ಪಡೆಯುತ್ತಿರುವಂತೆ ಫೋಟೊದಲ್ಲಿ ಕಾಣಿಸುತ್ತಿದೆ.'

ವಿಕ್ರಮ್‌ ಮಗ ಧ್ರುವ ಅಭಿನಯದ ಚೊಚ್ಚಲ ಸಿನಿಮಾ ‘ಆದಿತ್ಯ ವರ್ಮಾ’ ಬಿಡುಗಡೆಗೊಂಡ ಕೂಡಲೇ ವಿಕ್ರಮ್‌ ಈ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT