ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರಗಳಿಗೆ ಸಿಗಲಿದೆ ವಿಮರ್ಶಕರ ಪ್ರಶಸ್ತಿ

Last Updated 11 ಸೆಪ್ಟೆಂಬರ್ 2019, 10:14 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಚಿತ್ರರಂಗದಲ್ಲೇ ಮೊದಲ ಹೆಜ್ಜೆ ಎನ್ನುವಂತೆ ಕನ್ನಡ ಸಿನಿಮಾ ಪತ್ರಕರ್ತರುಒಳ್ಳೆಯ ಚಿತ್ರಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿ ವರ್ಷ ‘ಕನ್ನಡ ಚಿತ್ರ ವಿಮರ್ಶಕರ ಪ್ರಶಸ್ತಿ’ಗಳನ್ನು ನೀಡಲು ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ ಅಸ್ತಿತ್ವಕ್ಕೆ ತಂದಿದ್ದಾರೆ.

ಈ ಅಕಾಡೆಮಿಯು ಕನ್ನಡ ಚಲನಚಿತ್ರಗಳಿಗೆ 20ಕ್ಕೂ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿ ನೀಡಲು ಉದ್ದೇಶಿಸಿದೆ. ಸಿನಿಮಾ ಪತ್ರಕರ್ತರೇ ಸಿನಿಮಾಗಳನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಿದ್ದಾರೆ. ಪ್ರಶಸ್ತಿ‍ಪ್ರದಾನ ಸಮಾರಂಭದ ದಿನವೇ ಪ್ರಶಸ್ತಿ ಪುರಸ್ಕೃತಸಿನಿಮಾಗಳ ಹೆಸರನ್ನು ಪ್ರಕಟಿಸಲಾಗುತ್ತದೆ.

2019ನೇ ಸಾಲಿನ ಕನ್ನಡ ಚಲನಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಜ್ಯೂರಿ ಕಮಿಟಿಯನ್ನು ರಚಿಸಲಾಗಿದೆ. ಜ್ಯೂರಿಗಳಾಗಿ ಬಿ.ಎನ್‌.ಸುಬ್ರಹ್ಮಣ್ಯ, ಗಣೇಶ್ ಕಾಸರಗೋಡು, ಕೆ.ಎಚ್‌.ಸಾವಿತ್ರಿ, ಜಿ.ಎಸ್‌.ಕುಮಾರ್‌, ಕೆ.ಜಿ.ಕುಮಾರ್‌, ಡಿ.ಸಿ.ನಾಗೇಶ್‌, ಮುರಳೀಧರ ಖಜಾನೆ, ಮಹೇಶ್‌ ದೇವಶೆಟ್ಟಿ, ಸ್ನೇಹಪ್ರಿಯ ನಾಗರಾಜ್‌, ಕೆ.ಎಸ್‌.ವಾಸು ಅವರು ಸಿನಿಮಾಗಳನ್ನು ಆಯ್ಕೆ ಮಾಡಲಿದ್ದಾರೆ.

ಮಂಗಳವಾರ ಲಾಂಛನ ಅನಾವರಣಗೊಳಿಸುವ ಮೂಲಕಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಗೆವಿಧ್ಯುಕ್ತ ಚಾಲನೆ ನೀಡಿದಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌, ಚಿತ್ರೋದ್ಯಮ ಒಂದು ಕುಟುಂಬವಿದ್ದಂತೆ ಎಂದುಅಪ್ಪಾಜಿ ಯಾವಾಗಲೂಹೇಳುತ್ತಿದ್ದರು. ಈ ಕುಟುಂಬದಲ್ಲಿರುವವರನ್ನು ತಿದ್ದಬೇಕಲ್ಲ. ಆ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಹಾಗೆಯೇ ಯಾವುದೇ ಪ್ರಶಸ್ತಿ ಇರಲಿ ಅದಕ್ಕೊಂದು ಗೌರವ, ಘನತೆ ಇರುತ್ತದೆ. ಸಿನಿಮಾ ಮಾಡುವವರಿಗೆ ಮತ್ತು ಕಲಾವಿದರಿಗೆ ಪ್ರಶಸ್ತಿಗಳು ಬಂದಾಗ ಅದು ಟಾನಿಕ್ ಸಿಕ್ಕಂತೆ. ಅಕಾಡೆಮಿಯ ಚಟುವಟಿಕೆಗೆ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದರು.

‘ಚಿತ್ರರಂಗ ಎಂದಾಕ್ಷಣ ನಾನು, ಪುನೀತ್‌, ಸುದೀಪ್‌, ದರ್ಶನ್‌, ಯಶ್‌ ಇಷ್ಟೇ ಮಂದಿ ಹೀರೋಗಳಲ್ಲ. ಇನ್ನೂ ಹಲವು ಮಂದಿ ನಾಯಕ ನಟರಿದ್ದಾರೆ. ಅವರಿಗೂ ಬೆಂಬಲಕೊಡಿ. ಯಾರ ನಡುವೆಯೂ ಬೇಧಭಾವ ಎಣಿಸಬೇಡಿ’ ಎಂದು ಮಾಧ್ಯಮಗಳಿಗೂ ಕಿವಿಮಾತು ಹೇಳಿದರು.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ‘ಡಾ.ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌,ವಿಷ್ಣುವರ್ಧನ್‌, ಅಶ್ವಥ್‌ ಅವರಂತಹವರ ಹೆಸರುಗಳಲ್ಲಿ ಪ್ರಶಸ್ತಿಯನ್ನು ನೀಡಲು ಎಲ್ಲ ರೀತಿಯ ಸಹಕಾರ ನೀಡುತ್ತೇವೆ’ ಎಂದರು. ಈ ಮಾತಿಗೆ ದನಿಗೂಡಿಸಿದ ಶಿವರಾಜ್‌ಕುಮಾರ್‌, ‘ಇದು ಆಮಿಷವಲ್ಲ, ಇದೊಂದು ಪ್ರೀತಿ’ ಎನ್ನುವ ಮಾತು ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT