ನಟ, ನಿರ್ದೇಶಕ, ನಿರ್ಮಾಪಕ ಡಾಲಿ ಧನಂಜಯ್ ಅವರು ಕೈಪಿಡಿ ಮೂಲಕ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡ ಡಾಲಿ ಧನಂಜಯ್ ಅವರು, ‘ಆ ಚಿತ್ರಕಥೆ 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು. ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ. ಆದರೆ, ನಮ್ಮ ಕೆಲಸವೇ ಕಥೆ ಕೇಳುವುದು. ಆದಷ್ಟು ಕೇಳುವುದನ್ನು ತಡೆದು, ‘ಓದುವೆ, ಬೌಂಡ್ ಸ್ಕ್ರಿಪ್ಟ್ ಕೊಟ್ಟು ಹೋಗಿ’ ಅಂತ ಕೇಳ್ತಿನಿ. ಓದೋ ಪ್ರಯತ್ನ ಮಾಡ್ತಿನಿ. ಓದಿಸಿಕೊಳ್ಳೋದು ಚಿತ್ರಕಥೆಯ ತಾಕತ್ತು‘ ಎಂದು ಬರೆದುಕೊಂಡಿದ್ದಾರೆ.
.ಕೆಡಿ ಚಿತ್ರದ ‘ಶಿವ ಶಿವ’ ಹಾಡಿನ ಮೇಕಿಂಗ್ ವಿಡಿಯೊ ಹಂಚಿಕೊಂಡ ಪ್ರೇಮ್.ಡಿಕೆಡಿ ಸ್ಪರ್ಧಿಗಳಿಗೆ ಶಿವಣ್ಣ ದಂಪತಿಯಿಂದ ₹ 50 ಸಾವಿರ ಧನ ಸಹಾಯ.
‘ಹಾಗೆ ಓದುತ್ತಲೇ ನಕ್ಕು ನಗಿಸಿದ್ದು, ಕಣ್ಣುಂಬಿಸಿದ್ದು, ‘ಬಡವ ರಾಸ್ಕಲ್’, ‘ಟಗರುಪಲ್ಯ’ ಹಾಗೂ ಇನ್ನು ಬಿಡುಗಡೆಯಾಬೇಕಿರುವ ಪೂರ್ಣಚಂದ್ರ ನಟನೆಯ, ಅವಿನಾಶ್ ಬಲೆಕ್ಕಳ ನಿರ್ದೇಶನದ ‘ಹೆಗ್ಗಣ ಮುದ್ದು’. ಈ ಮಧ್ಯೆ ಗೆಳೆಯ ಪೂರ್ಣ ಒಂದು ಕಥೆಯ ಮೇಲೆ ಕೆಲಸ ಮಾಡುತ್ತಿರುವುದು ಆಗಾಗ ಕಣ್ಣಿಗೆ ಬೀಳುತ್ತಿತ್ತು. 'ಈ ಕಥೆ ಕೇಳು' ಅಂತ ಹೇಳ್ತಾ ಇದ್ರೂ, ನನ್ನ ಕೆಲಸದ ಒತ್ತಡದಲ್ಲಿ ಕೇಳೋಕೆ ಆಗಿರಲಿಲ್ಲ. ಪೂರ್ತಿ ಬರೆದು ಮುಗಿಸಿಕೊಡಿ ಓದುತ್ತೀನಿ ಅಂತ ಹೇಳಿ ನಾನೂ ಮರೆತು ಹೋದೆ. ಸುಮಾರು 6 ತಿಂಗಳ ನಂತರ, ಒಂದು ದಿನ ಬಾಲ್ಕನಿ ಅಲ್ಲಿ ನಿಂತು ಮಾತಾನಾಡುತ್ತಾ ನೆನಪಾಗಿ ಕೇಳಿದೆ. ‘ಚಿತ್ರಕಥೆ ಬರಿತಿದ್ರಲ್ಲ ಏನಾಯ್ತು?. ಬರೆಯುತ್ತಿದ್ದೇವು, ಆದರೆ, ಅಲ್ಲೇ ಟೇಬಲ್ ಮೇಲಿದೆ ನೋಡು 6 ತಿಂಗಳಿಂದ...ಇದನ್ನ ಸಿನಿಮಾ ಮಾಡಬಹುದಾ ಇಲ್ವಾ ಗೊತ್ತಾಗಲಿಲ್ಲ, ಅದಿಕ್ಕೆ ನಿಲ್ಸಿದಿವಿ' ಅಂತ ಹೇಳಿ ಹೋದ'..

‘ಬದುಕು ಎಷ್ಟೇ ಹೆದರಿಸಿದರೂ, ಯಾವಾಗಲೂ ನಗ್ತಾ ನಗಿಸುತ್ತಾ ತಮಾಷೆಯಾಗೆ ಇರೋ ಇನ್ನು, ಏನು ಬರೆದಿರಬಹುದು ಅನ್ನೋ ಕುತೂಹಲದಲ್ಲಿ ಅವತ್ತು ಆ ಚಿತ್ರಕಥೆನ ಓದಿದೆ. ಒಬ್ಬನೇ ನಗ್ತಾ ನಗ್ತಾ, ಎಲ್ಲ ಪಾತ್ರಗಳ ಜೊತೆ ಪ್ರಯಾಣ ಮಾಡ್ತಾ, ಓದು ಮುಗಿದಿದ್ದೇ ಗೊತ್ತಾಗ್ಲಿಲ್ಲ. ಈ ಕಥೆಯಲ್ಲಿ ಇವತ್ತಿನ ಬೆಂಗಳೂರನ್ನ ಎಷ್ಟು ಅರ್ಥಪೂರ್ಣವಾಗಿ ಕಟ್ಟಿದ್ದಾರೆ ಅಂದರೆ.. ಮಹಾನಗರಗಳ ಪಡಿಪಾಟಲುಗಳನ್ನ ನಗಿಸುತ್ತಾ ಮನ ಮುಟ್ಟ ಹಾಗೆ ಬರೆದಿದ್ದರು. ಆದರೆ, ಚಿತ್ರಕಥೆ ಮುಗಿದಿರಲಿಲ್ಲ’ ಎಂದಿದ್ದಾರೆ.

‘ಕೂಡಲೇ ಪೂರ್ಣಂಗೆ ಕಾಲ್ ಮಾಡಿ, ‘ಇದನ್ನ ಯಾಕೆ ಪೂರ್ಣಗೊಳಿಸಿಲ್ಲ? ಮಾಡಿ, ನಾನೇ ನಿರ್ಮಾಣ ಮಾಡುತ್ತೇನೆ ಎಂದೆ. ‘ಈ ಚಿತ್ರದಲ್ಲಿ ನೀನು ಕೂಡ ನಟನೆ ಮಾಡಬೇಕು ಅಂದರು. ನಾನು ಕೂಡ ಒಪ್ಪಿಗೆ ಸೂಚಿಸಿದೆ. ಶಶಾಂಕ್ ಸೋಗಾಲ್ಗೆ ಕರೆ ಮಾಡಿ ಈ ಕಥೆ ಓದು ಚೆನ್ನಾಗಿದೆ ಎಂದೆ. ಈಗಾಗಲೇ ನಿರ್ದೇಶಕರಾಗಿ ಗೆದ್ದಿದ್ದರು. ಈ ಚಿತ್ರದಲ್ಲಿ ಪೂರ್ಣನ ಜೊತೆ ಇರುತ್ತೀನಿ ಅಂದ. ನಿರ್ಮಾಣಕ್ಕೆ ಗೆಳೆಯ ಹರ್ಷ ಜೊತೆಯಾದ. ಜೇನುಕಲ್ ಸಿದ್ದಪ್ಪನಿಗೆ ಪೂಜೆ ಸಲ್ಲಿಸಿ ಕೆಲಸ ಶುರು ಮಾಡಿದ್ವಿ‘ ಎಂದು ಹೇಳಿಕೊಂಡಿದ್ದಾರೆ.

‘ಹತ್ತು ಹಲವು ಹೊಸ ಅದ್ಭುತ ಪ್ರತಿಭೆಗಳನ್ನ, ಒಂದಷ್ಟು ಝೆನ್ ಹುಡುಗರನ್ನ ಸೇರಿಸಿಕೊಂಡು, ಪೂರ್ಣಚಂದ್ರ ನಿರ್ದೇಶನದಲ್ಲಿ ಒಂದು ಒಳ್ಳೆಯ ಸಂಪೂರ್ಣ ಮನೋರಂಜನೆ ಸಿನಿಮಾ ಕಟ್ಟಿದಿವಿ. ಇನ್ನು ನಿಮ್ಮ ಮುಂದೆ ಬರೋದಷ್ಟೇ ಬಾಕಿ. ಬಹಳ ಉತ್ಸುಕತೆಯಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಹಬ್ಬದ ಸೀಸನ್ಗೆ ನಿಮ್ಮ ಮುಂದೆ ಸಿನಿಮಾ ಬರಲಿದೆ. ಶೀಘ್ರದಲ್ಲೇ ಈ ಚಿತ್ರದ ಶೀರ್ಷಿಕೆ ಘೋಷಣೆ ಮಾಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.