ಕೆಲ ವರ್ಷಗಳ ಹಿಂದೆ ಡಾಲಿ ಧನಂಜಯ ಮತ್ತು ಅವರ ಮೈಸೂರಿನ ಗೆಳೆಯರು ‘ಕೆಇಬಿ’ ಹೆಸರಿನ ಯೂಟ್ಯೂಬ್ ಚಾನೆಲ್ ಮಾಡಿ ವೀಕ್ಷಕರನ್ನು ನಗಿಸುತ್ತಿದ್ದರು. ನಿರ್ದೇಶಕ ಪವನ್ ಕುಮಾರ್ ಕೂಡ ಕೆಇಬಿ ಭಾಗವಾಗಿದ್ದರು. ಖಾಸಗಿ ವಾಹಿನಿಗಳಲ್ಲಿ ಬರುತ್ತಿದ್ದ ರಿಯಾಲಿಟಿ ಶೋಗಳ ಅಣಕು ಪ್ರದರ್ಶನದೊಂದಿಗೆ ಈ ತಂಡ ಗಮನ ಸೆಳೆದಿತ್ತು. ಇಲ್ಲಿನ ಸದಸ್ಯರೆಲ್ಲ ಸಿನಿಮಾ ರಂಗದಲ್ಲಿ ಚದುರಿ ಹೋದ ಕಾರಣ ‘ಕೆಇಬಿ’ಗೆ ವಿದ್ಯುತ್ಚ್ಛಕ್ತಿ ಇಲ್ಲದಂತಾಗಿತ್ತು. ಇದೀಗ ಮತ್ತೆ ಇವರೆಲ್ಲ ಒಟ್ಟಾಗಿದ್ದು, ಡಾಲಿ ಪಿಕ್ಚರ್ಸ್ ಜತೆ ಕೈಜೋಡಿಸಿ ‘ಮದರ್ ಪ್ರಾಮೀಸ್’ ಎಂಬ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಈ ಸಿನಿಮಾದೊಂದಿಗೆ ನಟರಾಗಿ ಗುರುತಿಸಿಕೊಂಡಿದ್ದ ಪೂರ್ಣಚಂದ್ರ ಮೈಸೂರು ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಗೊಂಡಿದ್ದು, ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು, ನಾಗಭೂಷಣ, ವಿನಯಾ ಪ್ರಕಾಶ್, ಡಾಲಿ ಧನಂಜಯ, ಗುರುದತ್ ಜೊತೆಗೆ ಹಲವು ಜನಪ್ರಿಯ ಹಾಸ್ಯ ನಟರು ಇದ್ದಾರೆ.

‘ಈ ಸಿನಿಮಾಗೆ ನಾನೇ ಕಥೆ, ಸಂಭಾಷಣೆ ಬರೆದಿದ್ದೇನೆ. ಚಿತ್ರಕಥೆಗೆ ಮಹಾದೇವ್ ಪ್ರಸಾದ್ ಹಾಗೂ ಧಾರವಾಡದ ಅರುಣ ಅವರು ಜತೆಯಾಗಿದ್ದಾರೆ. ಈಗಿನ ಜೆನ್ಜಿ ಹುಡುಗರನ್ನು ಸೇರಿಸಿಕೊಂಡು ಪೂರ್ಣ ಪ್ರಮಾಣದ ಮನರಂಜನಾ ಸಿನಿಮಾ ಕಟ್ಟಿದ್ದೇವೆ. ಈ ವರ್ಷವೇ ಚಿತ್ರ ತೆರೆಗೆ ಬರಲಿದೆ’ ಎಂದಿದ್ದಾರೆ ನಿರ್ದೇಶಕ. ರಾಹುಲ್ ರಾಯ್ ಛಾಯಾಚಿತ್ರಗ್ರಹಣ, ನವನೀತ್ ಶ್ಯಾಮ್ ಸಂಗೀತ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.