‘ಧಾಂಗಡಿ’ ಈ ವಾರ ತೆರೆಗೆ

7

‘ಧಾಂಗಡಿ’ ಈ ವಾರ ತೆರೆಗೆ

Published:
Updated:
‘ಧಾಂಗಡಿ’ ಚಿತ್ರತಂಡ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಜೀವನ, ಹೋರಾಟಗಳು, ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಅವರು ಕೈಗೊಂಡ ಯೋಜನೆಗಳು ಮತ್ತು ಅವರ ಕನಸುಗಳ ಬಗ್ಗೆ ಹೇಳುವ ‘ಧಾಂಗಡಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. 

ಕೆ. ಶರತ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ಬೆಳಗಾವಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಅಮಾವಾಸ್ಯೆ ದಿನದಂದು ಚಿತ್ರೀಕರಣ ಶುರು ಮಾಡಿ ಅದೇ ದಿನದಂದು ಕುಂಬಳಕಾಯಿ ಒಡೆದಿರುವುದು ಈ ಚಿತ್ರದ ವಿಶೇಷ. ಅಂಬೇಡ್ಕರ್‌ ಪಾತ್ರದಲ್ಲಿ ನಟಿಸಿರುವ ಡಾ.ಸಿದ್ರಾಮ ಕಾರಣಿಕ ಕಥೆ, ಚಿತ್ರಕಥೆ ಬರೆದಿದ್ದಾರೆ. ಅಂಬೇಡ್ಕರ್‌ ಅಭಿಮಾನಿಯಾಗಿ ಜೀವನದಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಪಾತ್ರಕ್ಕೆ ಸಂಜು ಜೀವ ತುಂಬಿದ್ದಾರೆ.

ಡಾ.ಸವಿತಾ, ರಾಘವೇಂದ್ರ ಸಿಂಪಿ, ಕನಕಲಕ್ಷ್ಮಿ, ಜಯಸೂರ್ಯ, ಭೀಮಪ್ಪ ಗಡಾದ, ಮಹೇಶ ವಾಲಿ ತಾರಾಗಣದಲ್ಲಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಪ್ರಮೋದ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿ, ದೀಪು ಅವರದ್ದು. ರಾಜಶೇಖರರೆಡ್ಡಿ ಸಂಕಲನ ನಿರ್ವಹಿಸಿದ್ದಾರೆ.

ಸುರೇಂದ್ರ ಉಗಾರೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವಲತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !