ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದರ್ಬಾರ್’ ಸೆಟ್‌ನಲ್ಲಿ ರಜನಿ ಮೊಮ್ಮಗ!

ರಜನಿ ಹೊಸ ಚಿತ್ರ
Last Updated 11 ಜೂನ್ 2019, 14:04 IST
ಅಕ್ಷರ ಗಾತ್ರ

ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರುವ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಈಚೆಗೆ ‘ದರ್ಬಾರ್’ ಸೆಟ್‌ನಲ್ಲಿ ತಮ್ಮ ಮೊಮ್ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸಿನಿಮಾದ ಶೂಟಿಂಗ್ ವೀಕ್ಷಿಸಿದ ರಜನಿ ಮತ್ತು ಅವರ ಮೊಮ್ಮಗ ಇಡೀ ಸೆಟ್‌ನ ಕೇಂದ್ರಬಿಂದುವಾಗಿದ್ದಾರೆ.

ರಜನಿ, ಮೊಮ್ಮಗನ ಜತೆ ಕುಳಿತಿರುವ ಚಿತ್ರವನ್ನು ‘ದರ್ಬಾರ್’ ಸಿನಿಮಾದ ಛಾಯಾಗ್ರಾಹಕ ಸಂತೋಷ ಶಿವನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ರಜನಿ ಸರ್ ತಮ್ಮ ಮೊಮ್ಮಗನೊಂದಿಗೆ–ಮಾನಿಟರ್ ನೋಡುತ್ತಿರುವ ಚಿತ್ರ ನನ್ನ ಐ ಫೋನ್‌ನಲ್ಲಿ ಸೆರೆಯಾಗಿದೆ’ಎಂದು ಶಿವನ್ ಬರೆದುಕೊಂಡಿದ್ದಾರೆ.

ಎ.ಆರ್. ಮುರುಗದಾಸ್ ನಿರ್ದೇಶನದ ‘ದರ್ಬಾರ್’ ಚಿತ್ರದ ಪೋಸ್ಟರ್‌ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿತ್ತು. ಕಾಪ್ ಪಾತ್ರದಲ್ಲಿ ರಜನಿ ಇರುವ ಚಿತ್ರದ ಪೋಸ್ಟರ್ ಇದಾಗಿದ್ದು, ಮುಂಬರುವ ವರ್ಷದ ಪೊಂಗಲ್ ವೇಳೆಗೆ ದರ್ಬಾರ್ ಬಿಡುಗಡೆಯಾಗಲಿದೆ ಎನ್ನುವ ಸಂದೇಶವೂ ಅದರಲ್ಲಿತ್ತು.

ಮುಂಬೈನಲ್ಲಿ ಶೂಟಿಂಗ್ ನಿರತವಾಗಿದ್ದ ಚಿತ್ರತಂಡದ ಕೆಲ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. ಈ ಚಿತ್ರದಲ್ಲಿ ನಟಿ ನಯನತಾರಾ ಮುಖ್ಯ ಪಾತ್ರದಲ್ಲಿದ್ದು, ರಜನಿಗೆ ನಾಯಕಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT