ಮುಂದಿನ ವಾರ ದೊಡ್ಡ ಸಿನಿಮಾಗಳ ಅಬ್ಬರವಿರುವುದರಿಂದ ಈ ವಾರ ಕೇವಲ ಒಂದು ಸಿನಿಮಾ ಮಾತ್ರ ತೆರೆಯಲ್ಲಿದೆ. ಈ ಹಿಂದೆ ‘ಟಾಕ್ಸಿಕ್’ ಚಿತ್ರ ಮಾ.19ಕ್ಕೆ ತೆರೆಗೆ ಬರುವುದಾಗಿ ಘೋಷಣೆಯಾಗಿತ್ತು. ಹೀಗಾಗಿ ಎಲ್ಲ ಸಿನಿಮಾಗಳು ಬಿಡುಗಡೆ ಮುಂದಕ್ಕೆ ಹಾಕಿಕೊಂಡಿದ್ದವು. ಆದರೆ ಇತ್ತೀಚೆಗಷ್ಟೇ ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಬದಲಾಯಿತ್ತು. ಕೊನೆ ಕ್ಷಣದಲ್ಲಿ ದಿನಾಂಕ ಬದಲಾದ ಪರಿಣಾಮವಾಗಿ ಈ ವಾರ ‘ದರ್ಜಿ’ ಎಂಬ ಸಿನಿಮಾ ಮಾತ್ರ ಬಿಡುಗಡೆಗೊಳ್ಳುತ್ತಿದೆ.

ಶ್ರೀನಗರ ಚಂದ್ರು ಬರೆದು, ನಿರ್ದೇಶಿಸಿರುವ ‘ದರ್ಜಿ’ ಬಟ್ಟೆ ಹೊಲಿಯುವ ಅಪ್ಪ ಮತ್ತು ಮಗನ ಕಥೆಯನ್ನು ಹೊಂದಿದೆ. ಇದೊಂದು ಕಲಾತ್ಮಕ ಚಿತ್ರವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಟಿ.ಆನಂದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮೇಶ್ ಕೃಷ್ಣನ್ ಸಂಗೀತ, ಚಂದ್ರು ಬೆಳವಂಗಲ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

‘ಆಕಾಶ್’ ಮರುಬಿಡುಗಡೆ

2005ರಲ್ಲಿ ತೆರೆಕಂಡ ಪುನೀತ್ ರಾಜ್ಕುಮಾರ್–ರಮ್ಯಾ ನಟನೆಯ ‘ಆಕಾಶ್’ ಚಿತ್ರ ಈ ವಾರ ಮರುಬಿಡುಗಡೆಗೊಳ್ಳುತ್ತಿದೆ. ಪುನೀತ್ ಜನ್ಮದಿನದ(ಮಾ.17) ಅಂಗವಾಗಿ ಮಹೇಶ್ ಬಾಬು ನಿರ್ದೇಶನದ ಈ ಚಿತ್ರವನ್ನು ಪಿಆರ್ಕೆ ಸಂಸ್ಥೆ ಮರುಬಿಡುಗಡೆ ಮಾಡುತ್ತಿದೆ. ಪುನೀತ್ ಮರಣಾನಂತರ ಸಂಸ್ಥೆಯು ಪ್ರತಿವರ್ಷ ಒಂದು ಹಳೆಯ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದೆ. ಕಳೆದ ವರ್ಷ ‘ಜಾಕಿ’ ಸಿನಿಮಾವನ್ನು ಮರುಬಿಡುಗಡೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.