ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸನ್ನಿಧಿಯಲ್ಲಿ 'ಶುಗರ್ ಫ್ಯಾಕ್ಟರಿ’ ಚಿತ್ರದ ಮುಹೂರ್ತ

Last Updated 29 ಜನವರಿ 2021, 5:42 IST
ಅಕ್ಷರ ಗಾತ್ರ

ಲವ್ ಮಾಕ್‌ಟೇಲ್‌ ಮೂಲಕ ಖ್ಯಾತರಾದ ನಟ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಮುಹೂರ್ತ ಮಹಾಲಕ್ಷ್ಮೀ ಲೇಔಟ್‌ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಜನವರಿ 28ರಂದು ನಡೆಯಿತು.

ಮೊದಲ ದೃಶ್ಯಕ್ಕೆ ತರುಣ್ ಸುಧೀರ್ ಕಿಶೋರ್ ಕ್ಲ್ಯಾಪ್‌ ಬೋರ್ಡ್‌ ತೋರಿಸಿದರು. ‌ಜಿ.ಎಚ್.ರಾಮಚಂದ್ರ ಅವರು‌ ಕ್ಯಾಮೆರಾ ಚಾಲನೆ ಮಾಡಿದರು.

ನಟಿ ಅಮೂಲ್ಯ, ಜಗದೀಶ್, ‘ಲಾಸ್ಟ್ ಬಸ್’ ಅರವಿಂದ್, ಮಯೂರ್ ಪಟೇಲ್ ಸಮಾರಂಭದಲ್ಲಿ ಹಾಜರಿದ್ದರು. ಶುಕ್ರವಾರ (ಜ. 29) ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ.

ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬೆಡಗಿ ಸೊನಲ್ ಮೋಂತೆರೋ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ‌ನಾಯಕಿಯರಾಗಿ ನಟಿಸುತ್ತಿದ್ದಾರೆ.

ರಂಗಾಯಣ ರಘು, ಗೋವಿಂದೇ ಗೌಡ, ಸೂರಜ್ ಕುಮಾರ್, ಮಹಾಂತೇಶ್(ಹೊಸ ಪರಿಚಯ), ಪವನ್ ಎಸ್. ನಾರಾಯಣ್, ಬ್ರೋ ಗೌಡ, ರಾಯಲ್ ರವಿ, ಅವೀಕ್ಷ, ನೀತೂ ರಾಯ್, ಡಿ.ಜಿ.ವಿಂಪಲ್ ತಾರಾಬಳಗದಲ್ಲಿದ್ಧಾರೆ. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್. ಈ ಚಿತ್ರ ನಿರ್ಮಿಸುತ್ತಿದ್ದಾರೆ.‌

ಚಿತ್ರದಲ್ಲಿ ಏಳು ಹಾಡುಗಳನ್ನು ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ, ಚಂದನ್ ಶೆಟ್ಟಿ, ರಾಘವೇಂದ್ರ ಕಾಮತ್ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿರುವ ‘ಶುಗರ್ ಫ್ಯಾಕ್ಟರಿ’ಗೆ ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT