ಬುಧವಾರ, ಸೆಪ್ಟೆಂಬರ್ 18, 2019
25 °C

‘ರಾಬರ್ಟ್‌’ಗೆ ಕನ್ನಡತಿ ಆಶಾ ಭಟ್‌ ನಾಯಕಿ

Published:
Updated:

‘ರಾಬರ್ಟ್’ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ಆ್ಯಕ್ಷನ್‌ ಕಟ್ ಹೇಳುತ್ತಿರುವುದು ತರುಣ್‌ ಸುಧೀರ್‌. ಈ ಚಿತ್ರದಲ್ಲಿ ದರ್ಶನ್‌ಗೆ ನಾಯಕಿ ಯಾರಾಗುತ್ತಾರೆ ಎಂಬ ಕುತೂಹಲ ಡಿಬಾಸ್ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಕೊನೆಗೂ, ಇಂದು ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂದಹಾಗೆ ದಚ್ಚುಗೆ ಜೋಡಿಯಾಗುತ್ತಿರುವುದು ಕನ್ನಡತಿ ಆಶಾ ಭಟ್‌.

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟೀಮಣಿಯರ ಹೆಸರು ‘ರಾಬರ್ಟ್’ ಸಿನಿಮಾದ ನಾಯಕಿಯ ಜಾಗದಲ್ಲಿ ಕೇಳಿ ಬಂದಿದ್ದು ಉಂಟು. ಅದರಲ್ಲಿ ಮುಖ್ಯವಾಗಿ ಮೆಹರಿನ್‌ ಪಿರ್ಜಾ ಅವರು ದರ್ಶನ್‌ ಜೊತೆಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹಬ್ಬಿತ್ತು. ಅವರ ಜಾಗಕ್ಕೆ ಈಗ ಭದ್ರಾವತಿಯ ಬೆಡಗಿ ಆಶಾ ಭಟ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಆಶಾ ಅವರು ಮಿಸ್ ಸುಪ್ರ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಕೀರ್ತಿಗೆ ಭಾಜನರಾಗಿದ್ದಾರೆ. ತರುಣ್ ಸುಧೀರ್ ಅವರು ಆಶಾ ನಾಯಕಿಯಾಗಿ ಆಯ್ಕೆ ಆಗಿರುವ ಕುರಿತು ಟ್ವಿಟ್ಟರ್‌ನಲ್ಲಿ ಅಧಿಕೃತವಾಗಿ ಖಚಿತಪಡಿಸಿದ್ದಾರೆ.

Post Comments (+)