ಸೋಮವಾರ, ಏಪ್ರಿಲ್ 6, 2020
19 °C

43ನೇ ವಸಂತಕ್ಕೆ‌ ಕಾಲಿಟ್ಟ ನಟ ದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿನಗರದ ‘ಬಾಕ್ಸ್ ಆಫೀಸ್ ಸುಲ್ತಾನಾ’ ಎಂದೇ ಖ್ಯಾತರಾದ ನಟ ದರ್ಶನ್ ತೂಗುದೀಪ್ ಭಾನುವಾರ 43ನೇ ವಸಂತಕ್ಕೆ‌ ಕಾಲಿಟ್ಟರು.

ಲೈಟ್ ಬಾಯ್ ಆಗಿ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ ಅಭಿಮಾನಿಗಳ ನೆಚ್ಚಿನ ‘ದಚ್ಚು’ ನಾಯಕ‌ನಟರಾಗಿ ಬಣ್ಣ ಹಚ್ಚಿದ್ದು 2002ರಲ್ಲಿ ತೆರೆಕಂಡ ‘ಮೆಜೆಸ್ಟಿಕ್’ ಮೂಲಕ. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು‌ ಪಿ.ಎನ್.‌ ಸತ್ಯ. ‘ಮುನಿರತ್ನ ಕುರುಕ್ಷೇತ್ರ’ ದರ್ಶನ್ ನಟನೆಯ 50ನೇ ಸಿನಿಮಾ.

ಬೆಂಗಳೂರಿನ ರಾಜರಾಜೇಶ್ವರಿನಗರದ ಐಡಿಯಲ್ ಟೌನ್‌ನಲ್ಲಿರುವ ಅವರ ನಿವಾಸದ ಮುಂದೆ‌ ಭಾನುವಾರ ಮಧ್ಯರಾತ್ರಿಯಿಂದಲೇ ಅಪಾರ ಸಂಖ್ಯೆಯಲ್ಲಿ‌ ಅಭಿಮಾನಿಗಳು ನೆರೆದಿದ್ದರು. ಈ ಹಿಂದೆಯೇ ದಚ್ಚು ನಟನೆಯ ‘ರಾಬರ್ಟ್’ ಚಿತ್ರದ ಟೀಸರ್ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿತ್ತು.

ನಿರ್ದೇಶಕ ತರುಣ್ ಸುಧೀರ್‌ ಮತ್ತು ಚಿತ್ರತಂಡ ಅಭಿಮಾನಿಗಳ ಎದುರು ಟೀಸರ್ ಅನ್ನು ಬಿಡುಗಡೆಗೊಳಿಸಿತು. ಈ ಚಿತ್ರದಲ್ಲಿ ದರ್ಶನ್ ವಿಭಿನ್ನ‌ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ, ಚಿತ್ರದ ಶೂಟಿಂಗ್‌ ಕೂಡ‌ ಪೂರ್ಣಗೊಂಡಿದೆ.

ಪೋಸ್ಟರ್‌ನಲ್ಲಿ ಹನುಮನಾಗಿ ಕಾಣಿಸಿಕೊಂಡಿದ್ದ ಅವರು ಟೀಸರ್‌ನಲ್ಲಿ ರಾಮ‌ ಮತ್ತು ರಾವಣನ ಬಗ್ಗೆ ಮಾತನಾಡಿದ್ದಾರೆ. ಟೀಸರ್ ‌ಬಿಡುಗಡೆಗೊಂಡಾಗ ಅವರ ಅಭಿಮಾನಿಗಳ‌ ಸಂಭ್ರಮ ಮುಗಿಲು ಮುಟ್ಟಿತು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು