ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸ್ಟ್‌ ಲುಕ್‌ ಹೇಗಿರಬಹುದು? ನಾಳೆ ‘ಕ್ರಾಂತಿ’ಯ ಮೊದಲ ನೋಟ

Last Updated 15 ಫೆಬ್ರುವರಿ 2022, 7:34 IST
ಅಕ್ಷರ ಗಾತ್ರ

ನಾಳೆ ಬಿಡುಗಡೆಯಾಗಲಿದೆ ದರ್ಶನ್‌– ರಚಿತಾರಾಂ ಅಭಿನಯದ ಕ್ರಾಂತಿ ಚಿತ್ರದ ಫಸ್ಟ್‌ಲು

ಕ್‌. ದರ್ಶನ್‌ ಕೆಲಕಾಲದಿಂದ ಮಾಧ್ಯಮಗಳಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ‘ಮೆಜೆಸ್ಟಿಕ್‌’ ಚಿತ್ರದ 25ನೇ ವರ್ಷಾಚರಣೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಫಸ್ಟ್‌ಲುಕ್‌ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಉಳಿದಿದೆ.

ಡಿ.ಬೀಟ್ಸ್‌ ಮ್ಯೂಸಿಕ್ ವರ್ಲ್ಡ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಫಸ್ಟ್‌ಲುಕ್‌ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕಿ ಶೈಲಜಾ ನಾಗ್‌ ತಿಳಿಸಿದ್ದಾರೆ.

2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ ‘ಯಜಮಾನ’ ಚಿತ್ರತಂಡವು ಈಗ ‘ಕ್ರಾಂತಿ’ ಸಿನಿಮಾದ ಮೂಲಕ ಇದೀಗ ಮತ್ತೆ ಒಂದಾಗಿದೆ. ಸುಮಲತಾ ಅಂಬರೀಷ್‌, ರವಿಚಂದ್ರನ್‌ ಕೂಡಾ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ವಿ.ಹರಿಕೃಷ್ಣ ನಿರ್ದೇಶನದ ಈ ಚಿತ್ರವನ್ನು ಮೀಡಿಯಾ ಹೌಸ್‌ ಸ್ಟುಡಿಯೊ ನಿರ್ಮಾಣ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT