ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾ...ಬಾ..ನಾ ರೆಡಿ: ರಾಬರ್ಟ್‌ ಪೋಸ್ಟರ್‌ಗೆ ದರ್ಶನ್‌ ಎದುರಾಳಿಗಳ ಎದೆಯಲ್ಲಿ ಢವ ಢವ

Last Updated 25 ಡಿಸೆಂಬರ್ 2019, 10:46 IST
ಅಕ್ಷರ ಗಾತ್ರ

ಬೆಂಗಳೂರು:ಅದು ಕಪ್ಪು–ಬಿಳುಪಿನ ದೃಶ್ಯ, ವಿನೂತನ ಕೇಶವಿನ್ಯಾಸ, ಹೊಸ ಬಗೆಯ ಕಾಸ್ಟ್ಯೂಮ್‌ನಲ್ಲಿಗ್ಯಾಂಗ್‌ಸ್ಟರ್‌ನಂತೆ ಕೈಯಲ್ಲಿ ಗನ್‌ ಹಿಡಿದು ಯುದ್ಧಕ್ಕೆ ಎದುರಾಳಿಯನ್ನು ಕರೆಯುವಂತೆ ನಿಂತಿರುವ ದರ್ಶನ್‌ ಲುಕ್‌ಗೆಬಾ... ಬಾ...ನಾ ರೆಡಿ ಎನ್ನುವ ಗತ್ತಿನ ಹಿನ್ನೆಲೆ ಧ್ವನಿ’ರಾಬರ್ಟ್‌' ಫಸ್ಟ್‌ಲುಕ್‌ ಮೋಷನ್‌ ಪೋಸ್ಟರ್‌ಗೆ ಸಖತ್‌ ಖದರ್‌ ತಂದುಕೊಟ್ಟಿದೆ.

ಈ ಬಾರಿಯಕ್ರಿಸ್‌ಮಸ್‌ಗೆ ದರ್ಶನ್‌ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ.’ರಾಬರ್ಟ್‌' ಸಿನಿಮಾದ ಫಸ್ಟ್‌ಲುಕ್‌ ಮೋಷನ್‌ ಪೋಸ್ಟರ್‌ಗೆ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ಬುಧವಾರ ಬೆಳಗ್ಗೆ 11.45ಕ್ಕೆಫಸ್ಟ್‌ಲುಕ್‌ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.ಪೋಸ್ಟರ್‌ ಬಿಡುಗಡೆಯಾಗಿ 3 ಗಂಟೆಗಳಲ್ಲಿ 4.5 ಲಕ್ಷ ಜನರು ವೀಕ್ಷಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೈರಲ್‌ ಆಗಿದೆ.

ರಾಬರ್ಟ್‌ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.ಪ್ರಸ್ತುತ ರಾಬರ್ಟ್ಚಿತ್ರತಂಡ ವಾರಣಾಸಿಯಲ್ಲಿ ಚಿತ್ರಿಕರಣ ಮಾಡುತ್ತಿದೆ. ಜನವರಿಯಲ್ಲಿ ಚಿತ್ರಿಕರಣ ಪೂರ್ಣವಾಗಲಿದೆ ಎನ್ನಲಾಗಿದೆ.

ದರ್ಶನ್‌ಗೆ ನಾಯಕಿಯಾಗಿಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್‌ ನಟಿಸಿದ್ದಾರೆ.ತೆಲುಗಿನ ಖ್ಯಾತ ಖಳನಟ ಜಗಪತಿಬಾಬು, ಚಂದನವನದ ವಿನೋದ್‌ ಪ್ರಭಾಕರ್‌ ಕೂಡ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಕಪ್ಪು-ಬಿಳುಪಿನ ಥೀಮ್‌ನಲ್ಲಿ ರಾಬರ್ಟ್‌ ಫಸ್ಟ್‌ಲುಕ್‌ ಪೋಸ್ಟರ್‌ ಮೂಡಿಬಂದಿದೆ. ದರ್ಶನ್‌ ಗನ್‌ ಹಿಡಿದಿರುವುದನ್ನು ನೋಡಿದರೆ ಇದೊಂದು ಗ್ಯಾಂಗ್‌ಸ್ಟರ್‌ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಈ ವರ್ಷ ದರ್ಶನ್‌ ನಟನೆಯ ‘ಯಜಮಾನ’, ‘ಮುನಿರತ್ನ ಕುರುಕ್ಷೇತ್ರ’ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ. ಎಂ.ಡಿ. ಶ್ರೀಧರ್‌ ನಿರ್ದೇಶನದ ‘ಒಡೆಯ’ ಚಿತ್ರವೂ ಉತ್ತಮ ಆರಂಭ ಕಂಡಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ‘ರಾಬರ್ಟ್‌’ ಮೇಲೂ ನಿರೀಕ್ಷೆಯ ಭಾರ ದುಪ್ಪಟ್ಟಾಗಿದೆ.

ರಾಬರ್ಟ್‌ ಫಸ್ಟ್‌ಲುಕ್‌ ಪೋಸ್ಟರ್‌ ಅನ್ನು ಟ್ವೀಟ್‌ ಮಾಡಿರುವ ದರ್ಶನ್‌ ಅಭಿಮಾನಿಗಳಿಗೆ ಕ್ರಿಸ್‌ಮಸ್‌ ಶುಭಾಶಯಗಳನ್ನು ಹೇಳಿದ್ದಾರೆ. ನಿಮ್ಮ ಈ ಪ್ರೀತಿಗೆ ಈ ದಾಸ ಸದಾ ಆಭಾರಿ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT