ದಾವಣಗೆರೆ: ‘2021ರಿಂದ ಸಿನಿ ಪ್ರಯಾಣ ಆರಂಭಿಸಿದ್ದೇನೆ. ಇದುವರೆಗೂ ದಾವಣಗೆರೆಯ ಯಾವುದೇ ಕಾರ್ಯಕ್ರಮಗಳಲ್ಲೂ ನಾನು ಭಾಗವಹಿಸಿರಲಿಲ್ಲ. ತುಂಬಾ ಗೌರವದಿಂದ ಆಹ್ವಾನಿಸಿದ್ದರಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದೆ’ ಎಂದು ನಟಿ ಮಲೈಕಾ ವಸುಪಾಲ್ ಹೇಳಿದರು.

ನಗರದ ಶಿವಯೋಗಾಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ‘ಸಿನಿಮಾ ಸಿರಿ– 25’ ಸುಮಧುರ ಗೀತೆಗಳ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಹಿರಿಯರ ಮಧ್ಯ ಕುಳಿತಿರುವುದು ಹೆಮ್ಮೆಯ ವಿಷಯ. ಕೌಟುಂಬಿಕ ಹಿನ್ನೆಲೆಗಿಂತ ವೈಯಕ್ತಿಕ ಸಾಧನೆ ಮುಖ್ಯ. ಸಾಕಷ್ಟು ಸಿನಿಮಾಗಳು ಕೈಯಲ್ಲಿವೆ. ಇಷ್ಟು ವರ್ಷಗಳ ಕಾಲ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ಪ್ರೇರಣಾದಾಯಕ’ ಎಂದರು.

ಹತ್ತಾರು ಹಾಡುಗಳನ್ನು ಹಾಡುವ ಮೂಲಕ ಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು.

ಸಿನಿಮಾ ಸಿರಿಯ ಅಧ್ಯಕ್ಷ ಅಂದನೂರು ಮುಪ್ಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳ್ಳಿಹಬ್ಬದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರಭಿ ಶಿವಮೂರ್ತಿ, ಜಿ.ಎಸ್. ನಾಗಪ್ರಕಾಶ್, ಟಿ.ಎಂ. ಪಂಚಾಕ್ಷರಯ್ಯ, ಪ್ರಮುಖರಾದ ಸಾಲಿಗ್ರಾಮ ಗಣೇಶ್ ಶೆಣೈ, ಎಂ.ಜಿ. ಜಗದೀಶ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-43-151645300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.