ದಾವಣಗೆರೆ: ನಟ ಎಂ.ಎನ್. ಸುರೇಶ್ ನಿರ್ದೇಶನದ ‘ಕ್ಷಮೆಯಿರಲಿ ತಂದೆ’ ಸಿನಿಮಾ ಜೂ.12ಕ್ಕೆ ರಾಜ್ಯದಾದ್ಯಂತ ತೆರೆಗೆ ಬರಲಿದೆ.

‘ದೇವಿರಮ್ಮ ಮಲ್ಲಿಕಾರ್ಜುನಸ್ವಾಮಿ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಮಧ್ಯಮ ವರ್ಗದ ಸರ್ಕಾರಿ ನೌಕರನ ಕುಟುಂಬದ ಕಥಾವಸ್ತುವನ್ನು ಸಿನಿಮಾ ಒಳಗೊಂಡಿದೆ. ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಆಶೀರ್ವದಿಸಬೇಕು’ ಎಂದು ನಟ, ನಿರ್ದೇಶಕ ಎಂ.ಎನ್. ಸುರೇಶ್ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಕನ್ನಡ ಸಿನಿಮಾಗಳ ಕಥಾವಸ್ತು ಜನರಿಗೆ ಇಷ್ಟವಾಗುತ್ತಿಲ್ಲ. ಕಥಾವಸ್ತು ಆಯ್ಕೆಯಲ್ಲಿ ಎಡವುತ್ತಿದ್ದೇವೆ. ಇದೇ ಕಾರಣಕ್ಕೆ ಒಟಿಟಿಯಲ್ಲಿ ಕೂಡ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಇಂತಹ ಅಪವಾದದಿಂದ ಈ ಸಿನಿಮಾ ಮುಕ್ತವಾಗಿದೆ’ ಎಂದರು.

ಶಿಕ್ಷಕ ಮಲ್ಲಿಕಾರ್ಜುನ್ ಬಾವಿಕಟ್ಟೆ, ಮನೋಜ್ ಪೂಜಾರ್, ಮಲ್ಲೇಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-43-1915335565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.