ರಂಜನಿ ರಾಘವನ್ ನಿರ್ದೇಶನದ ‘ಡಿ ಡಿ ಢಿಕ್ಕಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

‘ಪ್ರತಿ ಮನೆಯಲ್ಲಿ ನಡೆಯುವ ಘಟನೆಗಳೇ ಚಿತ್ರವಾಗಿದೆ. ಹಾಸ್ಯಮಯ ಕಥಾಹಂದರವಿದೆ. ಹೊರ ಊರಿನಿಂದ ಬೆಂಗಳೂರಿಗೆ ಬಂದು ಊರಿನ ಬಗ್ಗೆ ಹಪಹಪಿಸುವ ಪಾತ್ರ ಪ್ರೇಮ್ ಅವರದ್ದು. ಬಹುಭಾಗ ಬೆಂಗಳೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಒಂದು ಕಥೆ, ಒಂದು ಕನಸು, ಒಂದೂವರೆ ವರ್ಷದ ಪಯಣ. ಸಿನಿಮಾ ಪೂರ್ತಿಗೊಳಿಸುವುದೇ ದೊಡ್ಡ ಅನುಭವ. ಬಿಡುಗಡೆ ಇನ್ನೊಂದು ಪಾಠ ’ ಎಂದರು ರಂಜನಿ.

ಈ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್ ಮುಖ್ಯಪಾತ್ರಧಾರಿ. ಅವರ ಮಗನಾಗಿ ನಟ ಗಣೇಶ್ ಪುತ್ರ ವಿಹಾನ್ ಬಣ್ಣ ಹಚ್ಚಿದ್ದಾರೆ. ಇಳಯರಾಜ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಆರೂರು ಸುಧಾಕರ್ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಜಡೇಶ್ ಕೆ. ಹಂಪಿ ಬಂಡವಾಳ ಹೂಡಿದ್ದಾರೆ.

‘ಸದ್ಯ ಚಿತ್ರದ ಸಂಗೀತದ ಕೆಲಸ ನಡೆಯುತ್ತಿದೆ. ಜತೆಗೆ ಪ್ರಚಾರ ಕಾರ್ಯ ಪ್ರಾರಂಭಿಸಿದ್ದೇವೆ. ಜೂನ್ ವೇಳೆಗೆ ಚಿತ್ರ ಬಿಡುಗಡೆ ಆಲೋಚನೆಯಿದೆ. ತರುಣ್ ಸುಧೀರ್ ಕಥೆಯನ್ನು ಪೂರ್ತಿ ಕೇಳಿದ್ದರು. ಚಿತ್ರೀಕರಣ ಮುಗಿದ ಬಳಿಕ ಅವರು ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಇದು ನಮ್ಮ ತಂಡಕ್ಕೆ ಮತ್ತಷ್ಟು ಧೈರ್ಯ ನೀಡಿದೆ. ಸುಂದರ ರಾಜ್, ಗೋಪಾಲಕೃಷ್ಣ ದೇಶಪಾಂಡೆ, ಮಹಾಂತೇಶ್ ಸೇರಿದಂತೆ ಇನ್ನೂ ಕೆಲ ಜನಪ್ರಿಯ ಕಲಾವಿದರು ಚಿತ್ರದಲ್ಲಿದ್ದಾರೆ. ಕೌಟುಂಬಿಕ ಮನರಂಜನೆ ಕಥಾಹಂದರ ಹೊಂದಿರುವ ಚಿತ್ರವಿದು’ ಎಂದರು ರಂಜನಿ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-51-1523105635

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.