ಮಂಗಳವಾರ, ಅಕ್ಟೋಬರ್ 15, 2019
26 °C

ಡಿಡಿಎಲ್‌ಜೆ ಕಥೆಗೆ ಶಾರುಖ್ ನಾಯಕನಾಗಿದ್ದು ಹೀಗೆ

Published:
Updated:

ಮುಂಬೈನ ಮರಾಠಾ ಚಿತ್ರಮಂದಿರದಲ್ಲಿ ದಶಕಗಳ ಕಾಲ ಪ್ರದರ್ಶನ ಕಂಡ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೇ’ ಚಿತ್ರ ನೆನಪಿದೆಯಲ್ಲ? ಶಾರೂಖ್‌ ಖಾನ್‌ ಮತ್ತು ಕಾಜಲ್ ನಟನೆಯ ಮಧುರ ಪ್ರೇಮಕಾವ್ಯ? ಸಿನಿಮಾ ಪ್ರೇಮಿಗಳು ಪ್ರೀತಿಯಿಂದ ‘ಡಿಡಿಎಲ್‌ಜೆ’ ಎಂದು ಕರೆಯುವ ಸಿನಿಮಾ?

ಈ ಚಿತ್ರವನ್ನು ಇಂಡೊ–ಅಮೆರಿಕನ್ ಪ್ರೇಮಕಥೆಯ ರೀತಿಯಲ್ಲಿ ತೆರೆಗೆ ತರಬೇಕು ಎಂದು ಆದಿತ್ಯ ಚೋಪ್ರಾ ತೀರ್ಮಾನ ಮಾಡಿದ್ದರು. ರಾಜ್‌ ಮಲ್ಹೋತ್ರಾನ ಪಾತ್ರವನ್ನು ಟಾಮ್ ಕ್ರೂಸ್‌ ನಿಭಾಯಿಸಬೇಕಿತ್ತು. ಆದರೆ, ಆದಿತ್ಯ ಅವರ ತಂದೆ ಯಶ್ ಚೋಪ್ರಾ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ವಿದೇಶಿ ನಟ ಸಿನಿಮಾದ ಪ್ರಧಾನ ಪಾತ್ರ ಆಗುವುದು ಯಶ್ ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ, ಆದಿತ್ಯ ಅವರು ತಾವು ಹೊಸೆದ ಕಥೆಯನ್ನು ಪುನಃ ತಿದ್ದಿದರು. ಶಾರೂಖ್‌ ಅವರು ನಾಯಕ ನಟನಾಗಿ ಪ್ರವೇಶ ಪಡೆದರು.

ಇದನ್ನೂ ಓದಿ: ಹಿಟ್‌ ಚಿತ್ರ ನೀಡುವೆ: ಶಾರುಖ್ ಖಾನ್

Post Comments (+)