ತಾಯ್ತನ ದೀಪಿಕಾ ಬಿಚ್ಚುಮಾತು

ಮಂಗಳವಾರ, ಜೂನ್ 25, 2019
29 °C
ದೀಪಿಕಾ ಮತ್ತು ತಾಯ್ತನ

ತಾಯ್ತನ ದೀಪಿಕಾ ಬಿಚ್ಚುಮಾತು

Published:
Updated:
Prajavani

ಹೊಸದಾಗಿ ಮದುವೆಯಾದ ಜೋಡಿಗಳು ಇನ್ನೇನು ಹನಿಮೂನ್ ಮುಗಿಸಿ ವಾಪಸ್‌ ಆದ ಕೆಲ ದಿನಗಳಲ್ಲೇ ಪರಿಚಿತರು, ಸಂಬಂಧಿಕರು ಏನಾದರೂ ವಿಶೇಷ ಸುದ್ದಿ ಇದೆಯೇ ಎಂದು ದಂಪತಿಗಳನ್ನು ವಿಚಾರಿಸುವುದುಂಟು. ಇಂಥ ವಿಚಾರಣೆಗಳಿಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಯೂ ಹೊರತಾಗಿಲ್ಲ. 

ಈಚೆಗೆ ಕಾನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಿಳಿಹಸಿರಿನ ಉದ್ದನೆಯ ಉಡುಪು ತೊಟ್ಟು ಮಿಂಚಿದ್ದ ದೀಪಿಕಾಳ ಚಿತ್ರವನ್ನು ತುಸು ಮಾರ್ಪಡಿಸಿ ರಣವೀರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದೇ ತಡ, ಪ‍ರಿಚಿತರು ಸೇರಿದಂತೆ ಅಭಿಮಾನಿಗಳು ಸಾಲುಸಾಲಾಗಿ ವಿಶೇಷ ಸುದ್ದಿಯ ಬಗ್ಗೆ ವಿಚಾರಿಸಿದ್ದರು. ಒಬ್ಬ ಅಭಿಮಾನಿಯಂತೂ ದೀಪಿಕಾ ಗರ್ಭಿಣಿಯಾಗಿದ್ದಾರೆ. ಈ ಒಂಬತ್ತು ತಿಂಗಳು ನಮ್ಮ ದೀಪಿಕಾಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದೂ ರಣವೀರ್‌ಗೆ ಸಲಹೆ ನೀಡಿದ್ದ. 

ಮದುವೆಯಾದಾಗಿನಿಂದಲೂ ಇಂಥ ಅಂತೆ–ಕಂತೆಗಳ ಸುದ್ದಿಗಳನ್ನು ಕೇಳುತ್ತಾ ಬಂದಿರುವ ದೀಪಿಕಾ, ಇದೀಗ ತಾಯ್ತನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ನನ್ನ ಜೀವನದಲ್ಲಿ ನಾನು ಇತರ ಹೆಣ್ಣುಮಕ್ಕಳಂತೆ ಯಾವತ್ತಾದರೂ ಒಂದು ದಿನ ತಾಯ್ತನವನ್ನು ಅನುಭವಿಸುವುದು ಖಚಿತ. ಆದರೆ, ತಾಯ್ತನದ ನೆಪದಲ್ಲಿ ಹೆಣ್ಣಿಗೆ ಪದೇಪದೇ ಇಂಥ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ. ಮುಖ್ಯವಾಗಿ ದಂಪತಿಗಳ ಮೇಲೆ ಈ ವಿಷಯದ ಕುರಿತಾಗಿ ಒತ್ತಡ ಹೇರುವುದು ತರವಲ್ಲ. ಯಾವತ್ತು ಜನರು ಮಹಿಳೆಗೆ ಗರ್ಭಿಣಿಯಾಗುವುದು ಮತ್ತು ತಾಯ್ತನಕ್ಕೆ ಸಂಬಂಧಿಸಿದಂತೆ ವಿಷಯಗಳ ಕುರಿತಾಗಿ ಪ್ರಶ್ನಿಸುವುದನ್ನು ಬಿಡುತ್ತಾರೋ ಅಂದು ಸಮಾಜದಲ್ಲಿ ಬದಲಾವಣೆಯಾಗುತ್ತದೆ’ ಎಂದು ದೀಪಿಕಾ ಪ್ರಬುದ್ಧವಾಗಿ ನುಡಿದಿದ್ದಾರೆ. 

ದೀಪಿಕಾ ಸದ್ಯಕ್ಕೆ ಮೇಘನಾ ಗುಲ್ಜಾರ್ ನಿರ್ದೇಶನದ ‘ಚಪಾಕ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !