ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌: 15 ವರ್ಷ ಪೂರ್ಣಗೊಳಿಸಿದ ದೀಪಿಕಾ ಪಡುಕೋಣೆ

Last Updated 3 ಫೆಬ್ರುವರಿ 2022, 12:22 IST
ಅಕ್ಷರ ಗಾತ್ರ

ಕನ್ನಡ ಚಿತ್ರದ ಮೂಲಕ ಪರಿಚಿತರಾದ ನಟಿ ದೀಪಿಕಾ ಪಡುಕೋಣೆ ಅವರು ಹಿಂದಿ ಚಿತ್ರರಂಗ ಪ್ರವೇಶಿಸಿ 15 ವರ್ಷಗಳು ಪೂರೈಸಿವೆ. 2006ರಲ್ಲಿ ದೀಪಿಕಾ ಪಡುಕೋಣೆ ಅವರು ಕನ್ನಡದ 'ಐಶ್ವರ್ಯಾ' ಸಿನಿಮಾದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದರು.

2007ರಲ್ಲಿ 'ಓಂ ಶಾಂತಿ ಓಂ' ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಬಾಲಿವುಡ್‌ ಪ್ರವೇಶಿಸಿದರು. ಇದೀಗ ದೀಪಿಕಾ ಅವರ ಬಾಲಿವುಡ್‌ ಪ್ರಯಾಣ 15 ವರ್ಷಗಳನ್ನು ಪೂರೈಸಿದೆ. 'ಲವ್‌ ಆಜ್‌ ಕಲ್‌', 'ಕಾಕ್ಟೈಲ್‌', 'ಪಿಕು', 'ಗೋಲಿಯೋನ್‌ ಕಿ ರಾಸ್‌ಲೀಲಾ', 'ರಾಮ್‌-ಲೀಲಾ' ಮತ್ತು 'ಪದ್ಮಾವತ್‌' ಚಿತ್ರಗಳು ದೀಪಿಕಾರ ಸ್ಟಾರಿಸಮ್‌ ಅನ್ನು ಹೆಚ್ಚಿಸಿವೆ.

'ಸುದೀರ್ಘ ಸಿನಿ ಪ್ರಯಾಣದಿಂದ ಕಲಿಕೆ, ಅರ್ಥೈಸಿಕೊಳ್ಳುವಿಕೆ, ಬೆಳವಣಿಗೆ ಹಾಗೂ ವಿಕಸನಕ್ಕೆ ಸಹಕಾರಿಯಾಗಿದೆ. ಮುಂದೆ ಈ ಪ್ರಯಾಣವು ಹೀಗೆಯೇ ಸಾಗುತ್ತದೆ ಎಂದು ಭಾವಿಸಿದ್ದೇನೆ' ಎಂದು ಬಾಲಿವುಡ್‌ ಬದುಕಿನ ಬಗ್ಗೆ ದೀಪಿಕಾ ಪಡುಕೋಣೆ ತಿಳಿಸಿದ್ದಾರೆ.

'ಚಿತ್ರೀಕರಣದ ಸೆಟ್‌ಗೆ ಹೋಗುವಾಗ, ಹಲವು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿರುವ ಅನುಭವಿ ನಟಿ, ಎಲ್ಲರಿಗಿಂತ ಚೆನ್ನಾಗಿ ನನಗೇ ಗೊತ್ತು ಎಂಬ ಮನಸ್ಥಿತಿಯಲ್ಲಿ ಹೋಗುವುದಿಲ್ಲ. ಹೊಸ ಮಂದಿಯಿಂದ ಏನೇನು ಕಲಿಯುವುದಕ್ಕೆ ಸಾಧ್ಯ ಎಂಬುದನ್ನೇ ಮನಸ್ಸಿನಲ್ಲಿಟ್ಟುಕೊಂಡು ಹೋಗುತ್ತೇನೆ' ಎಂದು ಪಿಟಿಐ ಸಂದರ್ಶನದಲ್ಲಿ ದೀಪಿಕಾ ಹೇಳಿದ್ದಾರೆ.

ಮುಂಬರುವ 'ಗೆಹ್ರಾಯಿಯಾನ್‌' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿದ್ಧಾರ್ಥ್‌ ಚತುರ್ವೇದಿ, ಅನನ್ಯಾ ಪಾಂಡೆ ಮತ್ತು ಧೈರ್ಯಾ ಕರ್ವಾ ಚಿತ್ರದಲ್ಲಿದ್ದಾರೆ. ನಾಸೀರುದ್ದಿನ್‌ ಶಾ ಮತ್ತು ರಜತ್‌ ಕಪೂರ್‌ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಕುನ್‌ ಬಾತ್ರ ಅವರ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ ಚಿತ್ರದಲ್ಲಿ ದೀಪಿಕಾ ಅವರು ಅಲಿಷಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ 'ಮನುಷ್ಯ' ಸಹಜ ಎಂದಷ್ಟೇ ವಿವರಿಸಿದ್ದಾರೆ.

ಗೆಹ್ರಾಯಿಯಾನ್‌ ಚಿತ್ರದ ಬಳಿಕ ಪಠಾಣ್‌, ಪ್ರಾಜೆಕ್ಟ್‌ ಕೆ ಮತ್ತು ಫೈಟರ್‌ ಸಿನಿಮಾಗಳು ದೀಪಿಕಾರ ಕೈಯಲ್ಲಿವೆ. ಪಠಾಣ್‌ ಚಿತ್ರದಲ್ಲಿ 'ಓಂ ಶಾಂತಿ ಓಂ', 'ಚೆನ್ನೈ ಎಕ್ಸ್‌ಪ್ರೆಸ್‌' ಮತ್ತು 'ಹ್ಯಾಪಿ ನ್ಯೂ ಇಯರ್‌' ಚಿತ್ರಗಳಲ್ಲಿ ಕಮಾಲ್‌ ಮಾಡಿದ್ದ ತಾರಾ ಜೋಡಿ ಶಾರೂಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ಪುನಃ ಜೊತೆಯಾಗುತ್ತಿದ್ದಾರೆ.

2018ರಲ್ಲಿ ಸ್ವಂತ ಪ್ರೊಡಕ್ಷನ್‌ ಕಂಪನಿ 'ಕಾ ಪ್ರೊಡಕ್ಷನ್‌'ಅನ್ನು ಆರಂಭಿಸಿದರು. ಚಪಕ್‌(2020) ಮತ್ತು 83(2021) ಚಿತ್ರಗಳನ್ನು ನಿರ್ಮಿಸಿದ್ದಾರೆ. ಮಾನಸಿಕ ಆರೋಗ್ಯವನ್ನು ಪುಷ್ಠೀಕರಿಸುವ 'ಲಿವ್‌ ಲವ್‌ ಲಾಫ್‌ ಫೌಂಡೇಷನ್' ಕಟ್ಟಿದ್ದಾರೆ.

36 ವರ್ಷದ ನಟಿ ಹಾಲಿವುಡ್‌ನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. 'ಎಕ್ಸ್‌ಎಕ್ಸ್‌ಎಕ್ಸ್‌: ರಿಟರ್ನ್‌ ಆಫ್‌ ಕ್ಸಾಂಡರ್‌ ಕೇಜ್‌'(2017) ಹಾಲಿವುಡ್‌ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT