ಬಾಲಿವುಡ್ ಬೆಡಗಿ ಕನ್ನಡತಿ ದೀಪಿಕಾ ಪಡುಕೋಣೆ, ’ಬಾಹುಬಲಿ’ ಖ್ಯಾತಿಯ ಪ್ರಭಾಸ್ ಇಬ್ಬರು ತೆರೆ ಹಂಚಿಕೊಳ್ಳುತ್ತಿರುವ ಸುದ್ದಿಯೊಂದು ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಅನೇಕ ವೆಬ್‌ಪೋರ್ಟ್‌ಲ್‌ಗಳು ’ಪ್ರಭಾಸ್–ದೀಪಿಕಾ’ ಜೋಡಿಯಾಗಿ ನಟಿಸುತ್ತಾರಾ? ಎಂಬ ಪ್ರಶ್ನಾರ್ಥಕ ಶೀರ್ಷಿಕೆಗಳೊಂದಿಗೆ ಸುದ್ದಿ ಬಿತ್ತರಿಸುತ್ತಿದ್ದರು. ಈಗ ಆ ಎಲ್ಲ ’ಪ್ರಶ್ನಾರ್ಥಕ’ ಚಿನ್ಹೆಗಳ ಸುದ್ದಿಗೆ ದೀಪಿಕಾ ಉತ್ತರ ನೀಡಿದ್ದಾರೆ. ’ನಾನು ಪ್ರಭಾಸ್ ಜತೆ ನಟಿಸುತ್ತಿದ್ದೇನೆ. ಈ ಸಿನಿಮಾ ಪಯಣದ ಭಾಗವಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಪ್ರಭಾಸ್ ಜತೆಗೆ ನಟಿಸುತ್ತಿರುವುದನ್ನು ದೀಪಿಕಾ ಖಚಿತಪಡಿಸಿದ್ದಾರೆ. ಈ ಮೂಲಕಅಭಿಮಾನಿಗಳಿಗೆ ಇದು ಸಿಹಿಸುದ್ದಿ ನೀಡಿದ್ದಾರೆ.
ನಿರ್ದೇಶಕ ನಾಗ್ ಅಶ್ವಿನ್ ಅವರ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಪ್ರಭಾಸ್ ಜತೆ ನಟಿಸುತ್ತಿದ್ದಾರೆ. ಇದು ಪ್ರಭಾಸ್ ಅವರ 21ನೇ ಚಿತ್ರ. ಈ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ. ದೀಪಿಕಾ ಅವರು ತಮ್ಮ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ವಿಷಯವನ್ನು ವೈಜಯಂತಿ ಮೂವಿಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಇಬ್ಬರು ಖ್ಯಾತ ತಾರೆಯರು, ಪ್ರತಿಭಾನ್ವಿತ ಕಲಾವಿದರು ನಟಿಸುತ್ತಿರುವ ಚಿತ್ರವನ್ನು ನಿರ್ದೇಶಿರುವುದಕ್ಕೆ ನಾಗ್ ಅಶ್ವಿನ್ ಕೂಡ ಸಂತಸ ವ್ಯಕ್ತಪಡಿಸಿದ್ದರು. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪಾತ್ರ ತುಂಬಾ ವಿಶಿಷ್ಟವಾಗಿರಲಿದೆ ಎಂದು ಹೇಳಿಕೊಂಡಿದ್ದಾರೆ.
ನಟಿ ದೀಪಿಕಾ ಪಡುಕೋಣೆ ವೈಜಯಂತಿ ಮೂವಿಸ್ ಅವರನ್ನು ಟ್ವೀಟ್ ಅನ್ನು ತಮ್ಮ ಟ್ವಿಟರ್ ಪೋಸ್ಟ್‌ಗೆ ಟ್ಯಾಗ್ ಮಾಡಿದ್ದಾರೆ. ಪ್ರಭಾಸ್ ಕುಡ ’ವೆಲ್‌ಕಮ್ ಆನ್ ಬೋರ್ಡ್’ಎಂದು ಬರೆಯುವ ಮೂಲಕ ದೀಪಿಕಾ ಅವರನ್ನು ಸ್ವಾಗತಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.