ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಹೆರಾಯಿಯಾಂ ಚಿತ್ರದಲ್ಲಿನ ನಟನೆ ಕುರಿತು ಪ್ರಶಂಸೆ: ದೀಪಿಕಾ ಹೇಳಿದ್ದೇನು?

Last Updated 18 ಫೆಬ್ರುವರಿ 2022, 10:53 IST
ಅಕ್ಷರ ಗಾತ್ರ

ಬೆಂಗಳೂರು: ಗೆಹೆರಾಯಿಯಾಂ ಚಿತ್ರದಲ್ಲಿನ ತಮ್ಮ ನಟನೆಯ ಕುರಿತು ಕೇಳಿಬಂದಿರುವ ಪ್ರಶಂಸೆ ಬಗ್ಗೆ ದೀಪಿಕಾ ಪಡುಕೋಣೆ ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರವಾಗಿ ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಅಯೇಷಾ ಪಾತ್ರದಲ್ಲಿ ನಟಿಸಿದ್ದು ಅತ್ಯಂತ ಆಳವಾದ, ಅಳಿಸಲಾಗದ ಮತ್ತು ಸಿಹಿಯಾದ ಅನುಭವವಾಗಿದೆ’ ಎಂದು ತಿಳಿಸಿದ್ದಾರೆ.

‘ನಾನು ನಿಜವಾಗಿಯೂ ಕೃತಜ್ಞಳೂ ಹಾಗೂ ಭಾವಪರವಶಳೂ ಆಗಿದ್ದೇನೆ’ ಎಂದು ದೀಪಿಕಾ ಹೇಳಿದ್ದಾರೆ.

ಶಕುನ್ ಬಾತ್ರಾ ನಿರ್ದೇಶನದ ಗೆಹೆರಾಯಿಯಾಂ ಚಿತ್ರದ ಮುಖ್ಯಭೂಮಿಕೆಯಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ನಾಸಿರುದ್ದೀನ್ ಷಾ ಹಾಗೂ ರಜತ್ ಕಪೂರ್ ನಟಿಸಿದ್ದಾರೆ.

ಹೀರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಹಾಗೂ ಶಕುನ್ ಬಾತ್ರಾ ಚಿತ್ರವನ್ನು ನಿರ್ಮಿಸಿದ್ದಾರೆ.

ಫೆ. 11ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT