ಭಾನುವಾರ, ಆಗಸ್ಟ್ 18, 2019
21 °C

ಶ್ರೀದೇವಿ ಅಭಿನಯದ ರಿಮೇಕ್‌ ಚಿತ್ರದಲ್ಲಿ ದೀಪಿಕಾ?

Published:
Updated:

ಮುಂಬೈ: ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ ಅಭಿನಯದ ಜನಪ್ರಿಯ ಚಿತ್ರವೊಂದರ ರಿಮೇಕ್‌ನಲ್ಲಿ ನಟಿ ದೀಪಿಕಾ ಪಡುಕೋಣೆ ಸದ್ಯದಲ್ಲೇ ನಟಿಸಲಿದ್ದಾರೆ. ಇದರಲ್ಲಿ ಶ್ರೀದೇವಿ ನಿರ್ವಹಿಸಿದ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಬಿಗ್‌ ಹಿಟ್‌ ಚಿತ್ರ ‘ಪದ್ಮಾವತ್‌’ ಬಳಿಕ ದೀಪಿಕಾ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದಿದ್ದರು. ಜತೆಗೆ, ಜಾಹೀರಾತುಗಳಲ್ಲಿ ನಟಿಸುವುದು ಮತ್ತು ಇತರ ಕೆಲಸಗಳಲ್ಲಿ ವ್ಯಸ್ತರಾಗಿದ್ದರು. ಈ ನಡುವೆ ನವೆಂಬರ್‌ ತಿಂಗಳಲ್ಲಿ ರಣವೀರ್‌ ಸಿಂಗ್‌ ಜೊತೆ ಇಟಲಿಯಲ್ಲಿ ಮದುವೆಯಾಗಲಿದ್ದಾರೆ, ಮದುವೆ ಶಾಂಪಿಂಗ್‌ ಮಾಡುತ್ತಿದ್ದಾರೆ ಎಂದೂ ಸುದ್ದಿಯಾಗಿತ್ತು. 

ಮೂಲವೊಂದರ ಪ್ರಕಾರ, ದೀಪಿಕಾ ಅವರು ನಟಿ ಶ್ರೀದೇವಿ ನಟನೆಯ 40 ವರ್ಷಗಳ ಹಿಂದೆ ಬಿಡುಗಡೆಯಾದ ಜನಪ್ರಿಯ ಚಿತ್ರವೊಂದರ ರಿಮೇಕ್‌ನಲ್ಲಿ ಸದ್ಯವೇ ನಟಿಸಲಿದ್ದಾರೆ. ಇದನ್ನು ಬಾಲಿವುಡ್‌ ಹೆಸರಾಂತ ನಿರ್ದೇಶಕರೇ ಮಾಡಲಿದ್ದು, ರಿಮೇಕ್‌ ಚಿತ್ರವಾಗಿದ್ದರಿಂದ ಮೂಲ ಚಿತ್ರದ ಒಪ್ಪಿಗೆ ಪಡೆಯುವಂತಹ ಕಾನೂನು ಕೆಲಸ ನಡೆಯುತ್ತಿದೆ ಎನ್ನಲಾಗಿದೆ.

ಶಾರುಖ್‌ ಖಾನ್‌, ಅನುಷ್ಕಾ ಶರ್ಮ ಹಾಗೂ ಕತ್ರೀನಾ ಕೈಫ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಝೀರೋ’ ಚಿತ್ರದಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 

Post Comments (+)