ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗಳಿಗೆ ರಣವೀರ್ ಲಭ್ಯ; ಬುಕ್ಕಿಂಗ್‌ಗಾಗಿ ದೀಪಿಕಾರನ್ನು ಸಂಪರ್ಕಿಸಿ

Last Updated 31 ಅಕ್ಟೋಬರ್ 2019, 6:14 IST
ಅಕ್ಷರ ಗಾತ್ರ

ತಮ್ಮ ಹೊಸ ಸಿನಿಮಾ ‘83’ಗಾಗಿ ಮೀಸೆ ಬೋಳಿಸಿಕೊಂಡು ಸಖತ್‌ ಯಂಗ್‌ ಆಗಿ ಕಾಣುತ್ತಿರುವ ರಣವೀರ್‌ ಸಿಂಗ್‌, ಹೊಸ ಗೆಟಪ್‌ನಲ್ಲಿ ಮಾಡಿರುವ ಪೋಸ್ಟ್‌ ಈಗ ಅವರ ಅಭಿಮಾನಿಗಳನ್ನು ನೆಗೆಗಡಲಲ್ಲಿ ತೇಲಿಸುತ್ತಿದೆ.

ಅದೇನಪ್ಪ ಅಂತದ್ದು ಅಂತೀರಾ? ನೀಲಿ ಶೇರ್ವಾನಿ ತೊಟ್ಟ ಫೋಟೊ ಶೇರ್‌ ಮಾಡಿರುವ ರಣವೀರ್‌, ‘ಮದುವೆ ಕಾಲ ಶುರುವಾಗಿದೆ! ಮನರಂಜಿಸಲು ಲಭ್ಯ. ಕಾರ್ಯಕ್ರಮಗಳಿಗೆ, ಮದುವೆ, ಹುಟ್ಟುಹಬ್ಬದ ಪಾರ್ಟಿ, ಕೇಶ ಮುಂಡನ ಕಾರ್ಯಕ್ರಮಗಳಿಗೆ ಬರಲು ಸಿದ್ಧ!’ ಎನ್ನುವ ಒಕ್ಕಣೆಯನ್ನು ಅದಕ್ಕೆ ನೀಡಿ ಹಾಸ್ಯದ ಚಟಾಕಿ ಹಾರಿಸಿದ್ದಾರೆ.

ಹೀಗೆ ರಣವೀರ್‌ ಸಿಂಗ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡುತ್ತಿದ್ದಂತೆ, ಮೊದಲು ಕಮೆಂಟ್‌ ಮಾಡಿದ ಪತ್ನಿ ದೀಪಿಕಾ, ‘ರಣವೀರ್‌ ಅವರ ಬುಕ್ಕಿಂಗ್‌ಗಾಗಿ ನನ್ನನ್ನು ಸಂಪರ್ಕಿಸಿ’ ಎಂದು ಅದಕ್ಕೊಂದು ಪಂಚ್‌ ನೀಡಿದ್ದಾರೆ.

ಅರ್ಜುನ್‌ ಕಪೂರ್‌, ಅನುಪಮ್‌ ಖೇರ್‌, ಸೋಫಿ ಚೌದರಿ ಮತ್ತು ಏಕ್ತಾ ಕಪೂರ್‌ ಸಹ ಆ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದಾರೆ.

ರಣವೀರ್‌ ಈ ಪೋಸ್ಟ್‌ ಇನ್‌ಸ್ಟಾಗ್ರಾಂನಲ್ಲಿ 13 ಸಾವಿರ ಮಂದಿ ಕಮೆಂಟ್‌ ಮಾಡಿದ್ದು, 17 ಲಕ್ಷ ಮಂದಿ ಲೈಕ್‌ ಮಾಡಿದ್ದಾರೆ. ಇನ್‌ ಟ್ವಿಟ್ಟರ್‌ನಲ್ಲಿ 27 ಸಾವಿರ ಮಂದಿ ಲೈಕ್‌ ಒತ್ತಿದ್ದಾರೆ.

ಸಾಕಷ್ಟು ಭಿನ್ನ ಕಮೆಂಟ್‌ಗಳು ಈ ಪೋಸ್ಟ್‌ಗೆ ಬಂದಿದ್ದು, ಅದರಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

‘ಶಾರುಕ್‌ ಖಾನ್‌ ಅವರ ಕೆಲಸವನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ’ ಎಂದು ಟ್ವೀಟ್‌ನಲ್ಲಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT